ಪಿಜಿ ಆರಂಭಿಸಲು ಬಿಬಿಎಂಪಿಯಿಂದ ಕಡ್ಡಾಯ ಪರವಾನಿಗೆ ಪಡೆಯಬೇಕು: ರಮಣ್ ಗುಪ್ತ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದಲ್ಲಿ (PG)ಪಿಜಿ ಆರಂಭಿಸಲು ಬಿಬಿಎಂಪಿಯಿಂದ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು , ಅಪರಾಧ ಚಟುವಟಿಕೆಗಳನ್ನ ತಡೆಗಟ್ಟಲು (PG) ಕೇಂದ್ರಗಳಿಗೆ ಪೊಲೀಸರು ಮಾರ್ಗಸೂಚಿ ಪ್ರಕಟಿಸಬೇಕೆಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ರಮಣ್ ಗುಪ್ತ ತಿಳಿಸಿದ್ದಾರೆ.

ಪಿಜಿ ವಾಸಕ್ಕೆ ಬರುವ ಎಲ್ಲ ವ್ಯಕ್ತಿಗಳ ಗುರುತಿನ ಚೀಟಿ ಇತ್ತೀಚಿನ ಭಾವಚಿತ್ರ ಮತ್ತು ರಕ್ತ ಸಂಬಂಧಿಗಳ ವಿವರ,ಮೊಬೈಲ್ ನಂಬರ್ ದಾಖಲೆ ಮಾಡಬೇಕು, ಪಿಜೆಗೆ ಭೇಟಿ ನೀಡಲು ಬರುವ ಸಂಬಂಧಿಕರಗಿರಲಿ‌ ಅಥವಾ ಯಾರೇ ಆಗಿರಲಿ ಅವರ ವಿವರ ಪ್ರತ್ಯೇಕವಾಗಿ ನಿರ್ವಹಿಸಬೇಕು.
ಸಿಸಿಟಿವಿ,ಅಗ್ನಿ ಸುರಕ್ಷತಾ ವ್ಯವಸ್ಥೆ ಹೊಂದಿರಬೇಕು, ಮಾದಕ ವಸ್ತು ಸೇವನೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸ ಬಾರದು, ವಿದೇಶಿ ಪ್ರಜೆಗಳ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು. ವಾಸಕ್ಕೆ ಇರುವವರನ್ನು ಬಿಟ್ಟು ಇತರರಿಗೆ ತಾತ್ಕಾಲಿಕ ವಾಸ ಕಲ್ಪಿಸಬಾರದು, ನ್ಯಾಯಾಲಯದ ಆದೇಶದನ್ವಯದ ರಾತ್ರಿ 10ರಿಂದ ಬೆಳಗ್ಗೆ 6 ವರೆಗೆ ಧನ್ನಿವರ್ಧಕ ಬಳಸುವಂತಿಲ್ಲ.

ಇದ್ಯಾವುದು ಮುಂಜಾಗ್ರತೆ ಕ್ರಮ ಕೈ ಗೊಳ್ಳದಿದ್ದರೆ ಪಿಜಿ ಮಾಲೀಕರೆ ಹೊಣೆಯಾಗುತ್ತಾರೆಂದು ಮಾರ್ಗಸೂಚಿಯಲ್ಲಿ ತಿಳಿಸಬೇಕೆಂದು ರಮಣ್ ಗುಪ್ತ ತಿಳಿಸಿದ್ದಾರೆ

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!