ಬಿಗ್ ಬಾಸ್ ಮನೆಯಿಂದ ವರ್ತೂರು ಸಂತೋಷ್ ಔಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಿಗ್ ಬಾಸ್ ಮನೆಯಿಂದ ವರ್ತೂರು ಸಂತೋಷ್ ಅವರು ಎಲಿಮಿನೇಟ್ ಆಗಿದ್ದಾರೆ. ಫಿನಾಲೆಯಿಂದ ಔಟ್ ಆದ ಎರಡನೇ ಸ್ಪರ್ಧಿ ಅವರಾಗಿದ್ದಾರೆ. ಶನಿವಾರ ತುಕಾಲಿ ಸಂತೋಷ್ ಹೊರ ಬಂದಿದ್ದರು. ಇದೀಗ ಬೀನ್​ ಬ್ಯಾಗ್​ಮೇಟ್ ವರ್ತೂರು ಸಂತೋಷ್ ಕೂಡ ಹೊರ ಬಂದಿದ್ದಾರೆ. ಈ ಮೂಲಕ ಮನೆಯ ಸದಸ್ಯರ ಸಂಖ್ಯೆ ನಾಲ್ಕಕ್ಕೆ ಇಳಿಕೆ ಆಗಿದೆ.

ವರ್ತೂರು ಸಂತೋಷ್ ಅವರು ಬಿಗ್ ಬಾಸ್​ ಮನೆಯಲ್ಲಿ ಅಷ್ಟಾಗಿ ಗಮನ ಸೆಳೆಯಲಿಲ್ಲ. ಅವರು ಸೈಲೆಂಟ್ ಆಗಿ ಇರುತ್ತಿದ್ದುದೇ ಹೆಚ್ಚು. ಅವರು ಕತ್ತಿಗೆ ಧರಿಸಿದ್ದ ಹುಲಿ ಉಗುರಿನಿಂದ ಜೈಲಿಗೆ ಹೋದರು. ಈ ಕಾರಣಕ್ಕೆ ಅವರು ಒಂದು ವಾರ ದೊಡ್ಮನೆಯಿಂದ ಹೊರ ಇರಬೇಕಾಗಿ ಬಂದಿತ್ತು. ಒಂದು ವಾರಕ್ಕೆ ಅವರು ಮರಳಿ ಬಿಗ್ ಬಾಸ್ ಮನೆಗೆ ಬಂದರು. ನಂತರ ಬಿಗ್ ಬಾಸ್ ಮನೆಯಲ್ಲಿ ಅವರು ಎಲ್ಲರ ಗಮನ ಸೆಳೆಯೋಕೆ ಶುರು ಮಾಡಿದರು.

ಸದ್ಯ ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ, ಕಾರ್ತಿಕ್ ಗೌಡ, ಸಂಗೀತಾ ಶೃಂಗೇರಿ, ವಿನಯ್ ಗೌಡ ಇದ್ದಾರೆ. ಈ ಪೈಕಿ ಒಬ್ಬರಿಗೆ ಅದೃಷ್ಟ ಲಕ್ಷ್ಮಿ ಒಲಿಯಲಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!