Monday, October 2, 2023

Latest Posts

ಒಡಿಶಾ ರೈಲು ದುರಂತ: ಕೇಂದ್ರ ಆರೋಗ್ಯ ಸಚಿವರಿಂದ ವೈದ್ಯಕೀಯ ನೆರವು ಪರಿಶೀಲನೆ

 ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳು ಅಪಘಾತಕ್ಕೀಡಾಗಿದ್ದು, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಒಡಿಶಾಗೆ ಭೇಟಿ ನೀಡುತ್ತಿದ್ದಾರೆ. ಒಡಿಶಾ ರೈಲು ಅಪಘಾತದಲ್ಲಿ ಗಾಯಗೊಂಡ ಸಂತ್ರಸ್ತರಿಗೆ ನೀಡಲಾಗುತ್ತಿರುವ ವೈದ್ಯಕೀಯ ನೆರವನ್ನು ಪರಿಶೀಲಿಸಲಿದ್ದಾರೆ.

ಭುವನೇಶ್ವರದ ಕಟಕ್ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಲಿದ್ದಾರೆ. ರೈಲು ಅಪಘಾತದಲ್ಲಿ ಗಾಯಗೊಂಡವರನ್ನು ಆರೋಗ್ಯ ಸಚಿವರು ಭೇಟಿ ಮಾಡಿ ವೈದ್ಯರೊಂದಿಗೆ ಮಾತನಾಡಲಿದ್ದಾರೆ. ಬಾಲಸೋರ್ ಅಪಘಾತದಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ನೆರವು ನೀಡಲು ದೆಹಲಿ ಮತ್ತು ಭುವನೇಶ್ವರ ಏಮ್ಸ್‌ನ ವೈದ್ಯಕೀಯ ತಂಡಗಳು ಈಗಾಗಲೇ ಸ್ಥಳೀಯ ಆಸ್ಪತ್ರೆಗಳನ್ನು ತಲುಪಿವೆ.

ಭುವನೇಶ್ವರ ಏಮ್ಸ್ ನಲ್ಲಿ ಪ್ರಸ್ತುತ 100ಜನರ ಗುರುತಿಸಲಾಗದ ಮೃತ ದೇಹಗಳಿವೆ. ರೈಲು ಅಪಘಾತದಲ್ಲಿ ಮೃತದೇಹಗಳು ಗುರುತು ಹಿಡಿಯಲಾಗದಷ್ಟು ತುಂಡಾಗಿದ್ದವು. ಸಂತ್ರಸ್ತರನ್ನು ಆಸ್ಪತ್ರೆಗಳು ಮತ್ತು ಊರುಗಳಿಗೆ ಕರೆದೊಯ್ಯಲು ಎಪಿ ಮತ್ತು ತಮಿಳುನಾಡಿನಿಂದ ಆಂಬ್ಯುಲೆನ್ಸ್‌ಗಳು ಬಾಲಸೋರ್‌ಗೆ ತಲುಪಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!