Monday, October 2, 2023

Latest Posts

CLEANING TIPS| ಈ ಸುಲಭ ವಿಧಾನ ಬಳಸಿ, ಬಿಳಿ ಬಟ್ಟೆಯ ಮೇಲಿನ ಕಲೆ ತೆಗೆಯಿರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಾಲಾ ಮಕ್ಕಳ ಬಿಳಿ ಯೂನಿಫಾರಂ, ರಾಜಕಾರಣಿಗಳ ಬಿಳಿ ಬಟ್ಟೆ, ಇನ್ನು ವಿಶೇಷ ಕಾರ್ಯಕ್ರಮಗಳಿಗೆ ಉಡುವ ಬಿಳಿ ಪಂಚೆ, ಶರ್ಟು ಹೀಗೆ ಬಿಳಿ ಬಟ್ಟೆಗಳ ಬಳಕೆ ಸಾಮಾನ್ಯವೇ. ನಿತ್ಯ ಜೀವನದಲ್ಲಿ ಬಳಸುವ ಬಿಳಿ ಬಟ್ಟೆಗಳು ಕಲೆಯಾಗದಂತೆ ಕಾಪಾಡುವುದು ಬಹಳ ಕಷ್ಟ. ಈ ಕಲೆಗಳನ್ನು ಬಟ್ಟೆಯಿಂದ ತೆಗೆಯಲು ಹರಸಾಹಸ ಪಡಬೇಕಾಗುತ್ತದೆ. ಅನೇಕ ಬಾರಿ ಎಷ್ಟು ಪ್ರಯತ್ನ ಪಟ್ಟರೂ ಕಲೆ ಹೋಗದೆ ಬಟ್ಟೆಯೇ ವೇಸ್ಟ್‌ ಎಂಬ ಸ್ಥಿತಿಗೆ ಅನೇಕರು ಬರುತ್ತಾರೆ. ಹಾಗಾದ್ರೆ ಸುಲಭವಾಗಿ ಬಿಳಿ ಬಟ್ಟೆಯ ಮೇಲೆ ಇರುವ ಕಲೆಗಳನ್ನು ಹೇಗೆ ತೆಗೆಯಬಹುದು ನೋಡೋಣ.

ಬಿಳಿ ಬಟ್ಟೆಯನ್ನು ವಾಷಿಂಗ್‌ ಮೆಷಿನ್‌ ಅಥವಾ ಕೈಗಳನ್ನು ಬಳಸಿ ತೊಡೆದರೂ ಕೊಳೆ ಸಮರ್ಪಕವಾಗಿ ಹೋಗುವುದಿಲ್ಲ. ಅನೇಕ ಬಾರಿ ಬಟ್ಟೆಯ ಬಣ್ಣ ಮಾಸುವುದನ್ನೂ ಗಮನಿಸುತ್ತೇವೆ. ಉತ್ತಮದರ್ಜೆಯ ಬಟ್ಟೆಗಳಾದರೆ ವಾಷಿಂಗ್‌ ಮಿಷನ್‌ ಬಳಸಿದರೆ ಬಹುಬೇಗ ಹಾಳಾಗುತ್ತವೆ. ಕಲೆ ತೆಗೆಯಲು ಕಲ್ಲಿಗೆ ಉಜ್ಜುವುದು ಸಾಮಾನ್ಯ. ಇದರಿಂದ ಬಟ್ಟೆ ಬೇಗನೇ ಹಾಳಾಗುತ್ತವೆ.

ಬಿಳಿ ಬಟ್ಟೆಯನ್ನು ಒಗೆಯುವ ಮೊದಲು ಬಿಸಿ ನೀರಿನಲ್ಲಿ ವಾಷಿಂಗ್‌ ಲಿಕ್ವಿಡ್‌ ಬಳಸಿ ಹದಿನೈದು ನಿಮಿಷಗಳ ಕಾಲ ನೆನೆಸಿಡಿ. ನಂತರ ಮಿಷನ್‌ ಗೆ ಹಾಕುವುದರಿಂದ ಕಲೆಗಳು ಮಾಯವಾಗಿ ಬಟ್ಟೆ ಶುಭ್ರವಾಗುತ್ತವೆ. ವಾಷಿಂಗ್‌ ಮಿಷನ್‌ಗೆ ಪೌಡರ್‌ ಜೊತೆಗೆ ಶಾಂಪೂ ಸೇರಿಸಿ ಒಗೆಯುವುದರಿಂದ ಬಟ್ಟೆಗಳು ಬ್ರೈಟ್‌ ಆಗಿ ಕಾಣುತ್ತವೆ. ಬಟ್ಟೆಯಲ್ಲಿ ಕಲೆಯಾಗಿದ್ದರೆ ಕಲೆಯ ಭಾಗಕ್ಕೆ ಪೇಸ್ಟ್‌ ಬಳಸಿ, ಹಿಸುಕಿ ಸುಮಾರು ಹದಿನೈದು ನಿಮಿಷಗಳ ಕಾಲ ಬಿಡಿ. ನಂತರ ಬಿಸಿನೀರಿನಿಂದ ತೊಳೆಯಿರಿ. ನಂತರ ವಾಷಿಂಗ್‌ ಮಿಷನ್‌ನಲ್ಲಿ ತೊಳೆಯಿರಿ. ಇದರಿಂದ ಕಲೆಗಳು ಮಾಯವಾಗುತ್ತವೆ. ಬಟ್ಟೆ ಶುಭ್ರವಾಗುತ್ತವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!