ಮಂಡ್ಯ: ಆದಿವಾಸಿ ಸಮುದಾಯದ ಮುಖಂಡ ಕಿರಣ್‌ಕೊತ್ತಗೆರೆ ಬಿಜೆಪಿ ಸೇರ್ಪಡೆ

ಹೊಸದಿಗಂತ ವರದಿ, ಮಂಡ್ಯ:
ಅಲೆಮಾರಿ ಹಾಗೂ ಬುಡಕಟ್ಟು ಸಮುದಾಯದ ಮುಖಂಡ ಕಿರಣ್‌ ಕುಮಾರ್ ಅವರು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ರಾಷ್ಟ್ರದಲ್ಲಿ ಸುಮಾರು 11 ಕೋಟಿ ಅಲೆಮಾರಿ, ಆದಿವಾಸಿ, ಅರಣ್ಯ ಮೂಲ ನಿವಾಸಿ, ಆದಿ ಬುಡಕಟ್ಟು ಸಮುದಾಯಗಳು ಇದ್ದುಘ, ಇಂದಿಗೂ ಈ ಸಮುದಾಯದ ಜನರಿಗೆ ಕನಿಷ್ಟ ಸೂರು ಮತ್ತು ತುಂಡು ನೆಲ ಇಲ್ಲದೆ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಪಂಚಾಯಿತಿಯಿಂದ ಪಾರ್ಲಿಮೆಂಟಿನವರೆಗೂ ಅವಕಾಶ ವಂಚಿತರಾಗಿದ್ದಾರೆ. ಈ ಸಮುದಾಯಕ್ಕೆ ರಾಜಕೀಯ ನೆಲೆ ಒದಗಿಸುವುದು ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾಗಿ ಕಿರಣ್‌ಕುಮಾರ್ ಕೊತ್ತಗೆರೆ ತಿಳಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿಯಲ್ಲಿ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯನ್ನು ರಾಷ್ಟ್ರದ ಅತ್ಯುನ್ನತ ಹುದ್ದೆಯಾಗಿರುವ ರಾಷ್ಟ್ರಪತಿ ಸ್ಥಾನ ಕಲ್ಪಿಸಿಕೊಟ್ಟಿದ್ದು, ಇದವರೆವಿಗೂ ಯಾವುದೇ ರಾಜಕೀಯ ಪಕ್ಷಗಳು ಮಾಡದ ಕಾರ‌್ಯವನ್ನು ಬಿಜೆಪಿ ಮಾಡಿದೆ. ಪಕ್ಷದ ಈ ನಿಲುವನ್ನು ಮೆಚ್ಚಿ ತಾವು ಬಿಜೆಪಿ ಸೇರ್ಪಡೆಗೊಂಡಿದ್ದು, ಮುಂದಿನ ದಿನಗಳಲ್ಲಿ ನಮ್ಮ ಸಮುದಾಯಕ್ಕೂ ರಾಜಕೀಯ ಪ್ರಾತಿನಿಧ್ಯ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಕಾರ‌್ಯದರ್ಶಿ ರವಿಕುಮಾರ್, ಎಸ್ಸಿ ಮೋರ್ಚಾದ ಸಿದ್ದರಾಜು, ಜಿ.ಚಂದ್ರಣ್ಣ, ಶಿವಾನಂದ ಎಂ. ಭಜಂತ್ರಿ ಸೇರಿದಂತೆ ಹಲವರು ಈ ಸಂದಭದಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!