ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಮಂಡ್ಯ ಜಿಲ್ಲಾಡಳಿತ ಸಜ್ಜು: ಇಲ್ಲಿ ಎಷ್ಟಿದ್ದಾರೆ ಗೊತ್ತಾ ಮತದಾರರು?

ಹೊಸದಿಗಂತ, ಮಂಡ್ಯ:
ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಮಂಡ್ಯ ಜಿಲ್ಲಾಡಳಿತ ಸರ್ವ ಸಜ್ಜಾಗಿದೆ.
ಸಿದ್ಧತೆಗಳು ಹಾಗೂ ಮತದಾರರ ಅಂಕಿಅಂಶಗಳ ಕುರಿತು ಜಿಲ್ಲಾಧಿಕಾರಿ ಡಾ.ಕುಮಾರ ಸುದ್ದಿ ಗೋಷ್ಠಿ ನಡೆಸಿ ಸಮಗ್ರ ಮಾಹಿತಿ ನೀಡಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಲ್ಲಿ 17,59,175 ಮತದಾರರಿದ್ದಾರೆ. 8,67,652 ಪುರುಷರು, 8,91,355 ಹಾಗೂ 168 ಇತರೆ ಮತದಾರರಿದ್ದಾರೆ ಎಂದು ಅವರು ಅಂಕಿಅಂಶ ನೀಡಿದರು.
ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಳಲ್ಲಿ 7,60,248 ಪುರುಷರು, 7,81,452 ಮಹಿಳೆಯರು ಹಾಗೂ 156 ಇತರೆ ಮತದಾರರು ಸೇರಿ 15,41,856 ಮತದಾರರಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ಕ್ಷೇತ್ರ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವುದರಿಂದ ಆ ಕ್ಷೇತ್ರದೊಳಗೆ 1,07,404 ಪುರುಷರು, 1,09,903 ಮಹಿಳೆಯರು ಹಾಗೂ 12 ಇತರೆ ಮತದಾರರು ಸೇರಿ 1,17,319 ಮತದಾರರಿದ್ದಾರೆ ಎಂದು ತಿಳಿಸಿದರು.
ಈ ಬಾರಿ 35,140 ಯುವ ಮತದಾರರರು ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 18 ವರ್ಷ ತುಂಬಿದ 19004 ಯುವಕರು, 16,127 ಯುವತಿಯರು ಹಾಗೂ 9 ಇತರೆ ಮತದಾರರಿದ್ದಾರೆ. ಇದರಲ್ಲಿ ಮಂಡ್ಯ ಜಿಲ್ಲೆಯಲ್ಲಿ 16,216 ಯುವಕರು, 13,958ಯುವತಿಯರು, ಇತರೆ 9 ಮತದಾರರೊಂದಿಗೆ 30183 ಯುವ ಮತದಾರರಿದ್ದರೆ, ಕೆ.ಆರ್.ನಗರ ಕ್ಷೇತ್ರದ 2788 ಯುವಕರು, 2169 ಯುವತಿಯರು ಸೇರಿ 4957 ಯುವ ಮತದಾರರೂ ಮತಪಟ್ಟಿಯಲ್ಲಿದ್ದಾರೆ ಎಂದು ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!