ಮಂಡ್ಯ ಜಿಲ್ಲೆ ಜೆಡಿಎಸ್​ನ ಭದ್ರಕೋಟೆ ಅನ್ನೋದು ಹಾಸ್ಯಾಸ್ಪದ: ಸುಮಲತಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಮಂಡ್ಯ ಜಿಲ್ಲೆ ಜೆಡಿಎಸ್​ನ ಭದ್ರಕೋಟೆ ಅನ್ನೋದು ಹಾಸ್ಯಾಸ್ಪದ. ಇಲ್ಲಿ ಯಾರ‍್ಯಾರೋ ಹೋಗಿದ್ದಾರೆಂದು ಇತಿಹಾಸ ನೋಡಿದರೆ ತಿಳಿಯುತ್ತೆ ಎಂದು ಸಂಸದೆ ಸುಮಲತಾ (Sumalatha) ಹೇಳಿದ್ದಾರೆ.

ಮಂಡ್ಯದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಟಾರ್ಗೆಟ್ ಭ್ರಷ್ಟ ರಾಜಕಾರಣದ ವಿರುದ್ಧ ಮಾತ್ರ. ಜೆಡಿಎಸ್​ ಶಾಸಕ ಸಿ.ಎಸ್.ಪುಟ್ಟರಾಜು ವಿರುದ್ಧ ಸಿಬಿಐ ಪ್ರಕರಣವಿದೆ. ಜೇಬಲ್ಲಿ ಕೆಂಡ ಇಟ್ಟುಕೊಂಡು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಮೊದಲು ಮಂಡ್ಯಕ್ಕೆ JDS ನಾಯಕರ ಕೊಡುಗೆ ಏನಿದೆ ಎಂದು ತೋರಿಸಲಿ. ಅಶೋಕ್ ಜಯರಾಮ್​ಗೆ ಜೆಡಿಎಸ್​ನಿಂದ ಅನ್ಯಾಯ ಆಗಿದೆ. ನನ್ನ ಮಗ ಬೇರೆ ಅಲ್ಲ ಎಸ್.ಟಿ ಜಯರಾಮ್​ ಮಗ ಬೇರೆ ಅಲ್ಲ. ಆದರೆ ಕುಮಾರಸ್ವಾಮಿಯವರು ಏನು ಮಾಡಿದರು. ಈ ಬಾರಿ ಜಯರಾಮ್​ಗೆ ಜನ ಆಶೀರ್ವದಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.

ಅಂಬರೀಶ್​​ಯಿಂದ ಏನು ಪ್ರಯೋಜನವಿಲ್ಲವೆಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, 2018ರಲ್ಲಿ ಕುಮಾರಸ್ವಾಮಿ ಸಿಎಂ ಆಗೋಕೆ ಕಾರಣ ಯಾರು ಎಂದು ಪ್ರಶ್ನಿಸಿದರು. ಅಪಮಾನ ಆಗಿದ್ದಕ್ಕೆ ಅಂಬರೀಶ್​ ಅಭಿಮಾನಿಗಳಿಂದ ತಕ್ಕ ಪಾಠ ಮಾಡಲಾಯಿತು. ಕಾಂಗ್ರೆಸ್​ಗೆ ಅಂಬರೀಶ್​ ಅಭಿಮಾನಿಗಳು ತಕ್ಕ ಪಾಠ ಕಲಿಸಿದ್ದಾರೆ. ಹಾಗಾಗಿಯೇ 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆದರು. ಆಗ ಮೊದಲನೇ ದಿನವೇ ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋದರು. ಮಂಡ್ಯಕ್ಕೆ ಈ ನಾಯಕರ ಕೊಡುಗೆ ಏನಿದೆ ಎಂದು ತೋರಿಸಲಿ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!