ಕುಡಿದ ನಂತರದ ಗಲಾಟೆ ಹತ್ಯೆಯಲ್ಲಿ ಕೊನೆ!

 

ಹೊಸ ದಿಗಂತ ವರದಿ, ಮಂಡ್ಯ 

ನಗರದ ಫ್ಯಾಕ್ಟರಿ ವೃತ್ತದ ಬಾರ್ ಅಂಡ್ ರೆಸ್ಟೋರೆಂಟ್ ಎದುರು ಗುರುವಾರ ರಾತ್ರಿ ದುಷ್ಕರ್ಮಿಗಳು ಕಡಿಲುವಾಗಿಲು ಗ್ರಾಮದ ಗುರು ವಿಲಾಸ್(35) ರನ್ನು ಹತ್ಯೆ ಮಾಡಿದ್ದಾರೆ.
ಬಾರ್ ನಲ್ಲಿ ಮದ್ಯಪಾನದ ನಂತರ ಜೊತೆಯಲ್ಲಿ ಇದ್ದವರ ನಡುವೆ ಜಗಳ ನಡೆದಿದ್ದು, ಇದೇ ವೇಳೆ ಗುರುವಿಲಾಸ್ ಹತ್ಯೆ ನಡೆದಿರುವುದಾಗಿ ತಿಳಿದುಬಂದಿದೆ.
ಮದ್ದೂರು ತಾಲೂಕು ಕಡಿಲುವಾಗಿಲು ಗ್ರಾಮದ ಗುರುಮೂರ್ತಿ – ಜಯಮ್ಮ ದಂಪತಿಗಳ ಪುತ್ರ ಗುರು ವಿಲಾಸ್ ಚಾಲಕ ವೃತ್ತಿಯಲ್ಲಿದ್ದು, ಗೆಜ್ಜಲಗೆರೆಯ ಗಾರ್ಮೆಂಟ್ಸ್ ಗೆ ನೌಕರರನ್ನು ಕರೆದುಕೊಂಡು ಹೋಗುವ ಕೆಲಸದಲ್ಲಿದ್ದರು. ಮೃತ ಯುವಕಗೆ ಪತ್ನಿ ಮತ್ತು ಹೆಣ್ಣು ಮಗು ಇದ್ದಾರೆ. ಸಾಂಸಾರಿಕ ವಿರಸವೂ ತಲೆದೋರಿದ್ದಾಗಿ ಸ್ಥಳೀಯರು ಹೇಳುತ್ತಾರೆ.
ಬಾರಿನಲ್ಲಿ ರಾತ್ರಿ ಹತ್ತರ ನಂತರ ಜಗಳ ಶುರುವಾಗಿ ವಿಕೋಪಕ್ಕೆ ತಿರುಗಿದಾಗ ತಪ್ಪಿಸಿಕೊಳ್ಳಲು ಬಾರ್ ನಿಂದ ಹೊರ ಓಡಿದ್ದು, ಅಟ್ಟಾಡಿಸಿಕೊಂಡು ಬಂದ ದುಷ್ಕರ್ಮಿಗಳು ಐಸಿಐಸಿಐ ಬ್ಯಾಂಕ್ ಬಳಿ ದೇಹದ ಬೆನ್ನಿನ ಭಾಗಕ್ಕೆ ಇರಿದು ನಂತರ ಕತ್ತು ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಪೂರ್ವ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!