ಬೀಚ್ ಉತ್ಸವಕ್ಕೆ ರೈಲ್ವೆ ಸಾಥ್: ಬೇಕಲ ನಿಲ್ದಾಣದಲ್ಲಿ ಒಂದು ನಿಮಿಷದ ಸ್ಟಾಪ್‌ಗೆ ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯ ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವಕ್ಕೆ ರೈಲ್ವೆ ಇಲಾಖೆ ಕೂಡಾ ಸಾಥ್ ನೀಡಿದೆ.
ಇದರ ಭಾಗವಾಗಿ ಡಿ.22 ರಿಂದ 31ರವರೆಗೆ ಎಲ್ಲಾ ರೈಲುಗಳಿಗೆ ಬೇಕಲ ನಿಲ್ದಾಣದಲ್ಲಿ ಒಂದು ನಿಮಿಷಗಳ ಕಾಲ ನಿಲುಗಡೆಗೆ ವಿಶೇಷ ಅನುಮತಿ ನೀಡಿದೆ.
ಚೆನ್ನೈ-ಎಗ್ಮೋರ್ – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್, ನಾಗರ್ ಕೋವಿಲ್ – ಮಂಗಳೂರು ಪರಶುರಾಮ್ ಎಕ್ಸ್‌ಪ್ರೆಸ್, ಚೆನ್ನೈ- ಮಂಗಳೂರು ವೆಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್ ರೈಲುಗಳಿಗೆ ತಾತ್ಕಾಲಿಕ ನಿಲುಗಡೆಗೆ ಇಲಾಖೆ ಅವಕಾಶ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!