ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದಲ್ಲಿ ಡಿಸೆಂಬರ್ 21, 22 ಮತ್ತು 23 ರಂದು ನುಡಿಯಾತ್ರೆ ನಡೆಯಲಿದ್ದು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಮಂಡ್ಯ ಶೈಲಿಯ ಭೋಜನಕ್ಕೆ ಒತ್ತು ನೀಡಲಾಗಿದೆ. ಸಮ್ಮೇಳನಕ್ಕೆ ಬರುವ ಕನ್ನಡಾಭಿಮಾನಿಗಳಿಗೆ ಪುಷ್ಕಳ ಭೋಜನ ಉಣಬಡಿಸಲು ಸಿದ್ಧತೆ ನಡೆದಿದೆ. ಒಂದು ದಿನಕ್ಕೆ 70 ಸಾವಿರ ಜನರಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ರಾತ್ರಿ ಭೋಜನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈಗಾಗಲೇ ನಗರ ಹೊರವಲಯದ ಶ್ರೀನಿವಾಸಪುರ ಬಳಿ ನಿರ್ಮಾಣವಾಗುತ್ತಿರುವ ವೇದಿಕೆ ಸಮೀಪವೇ ಊಟ ವಿತರಣೆಗೂ ಕೌಂಟರ್‌ಗಳನ್ನು ನಿರ್ಮಿಸಲಾಗುತ್ತಿದೆ.
ಈ ದಿನ ಊಟ ತಿಂಡಿ ಏನೇನಿದೆ?
- ಬೆಳಗ್ಗೆ ತಿಂಡಿ – ರಾಗಿದೋಸೆ, ಸಿಹಿಪೊಂಗಲ್, ಖಾರಾ ಪೊಂಗಲ್.
- ಮಧ್ಯಾಹ್ನ ಊಟ – ಅಕ್ಕಿರೊಟ್ಟಿ, ಮಿಶ್ರ ತರಕಾರಿ ಪಲ್ಯ, ವೆಜ್ ಪಲಾವ್, ರಾಯತ, ಅನ್ನ, ಚಿತ್ತಕದ ಬೇಳೆ ಸಾಂಬಾರ್, ಲಾಡು, ಹಪ್ಪಳ, ಸಲಾಡ್.
- ರಾತ್ರಿ ಊಟ – ಚಪಾತಿ, ಸಾಗು, ಗೀರೈಸ್, ಕುರ್ಮಾ, ಡ್ರೈ ಜಾಮೂನು, ಅನ್ನ, ತರಕಾರಿ ಸಾಂಬಾರ್, ಮೊಸರು, ಬಾಳೆಹಣ್ಣು, ಕೋಸಂಬರಿ, ಹಪ್ಪಳ, ಸಲಾಡ್.