ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಮದುವೆಯಾದವರಿಗೂ ಇನ್ನೊಬ್ಬರ ಮೇಲೆ ಪ್ರೀತಿಯಾಗುವ ಸುದ್ದಿಗಳನ್ನು ಕೇಳಿಯೇ ಇರ್ತೀರಿ. ಎಷ್ಟೋ ಮಂದಿ ಇದರಿಂದ ಕೋಪಕ್ಕೆ ಒಳಗಾಗಿ ಕೊಲೆ, ಫಿಸಿಕಲ್ ವೈಲೆನ್ಸ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ಗಂಡ ತನ್ನ ಹೆಂಡತಿಯ ಬಾಯ್‌ಫ್ರೆಂಡ್‌ನ್ನು ಮನೆಗೆ ಕರೆದು ಆತನೊಂದಿಗೆ ಮದುವೆ ಮಾಡಿಸಿದ್ದಾರೆ.
ಈ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದ್ದು, ಇಲ್ಲಿನ ಮೂರು ಮಕ್ಕಳ ತಾಯಿಯೊಬ್ಬಳಿಗೆ ಇಬ್ಬರು ಮಕ್ಕಳ ತಂದೆಯೊಂದಿಗೆ ಲವ್ ಆಗಿದ್ದು, ಈ ವಿಷಯ ಬಹಿರಂಗವಾಗುತ್ತಿದ್ದಂತೆ ಮಹಿಳೆಯ ಗಂಡ ಈ ಪ್ರೇಮಿಗಳಿಬ್ಬರಿಗೆ ಮದುವೆ ಮಾಡಿಸಿದ್ದಾನೆ.
ಕಳೆದ 12 ವರ್ಷದ ಹಿಂದೆ ಈ ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದರು. ಆದ್ರೆ ಇದೀಗ ಆಕೆ ಇನ್ನೊಬ್ಬ ವ್ಯಕ್ತಿಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದು, ಆಕೆಯ ಸಂತೋಷಕ್ಕೆ ಅಡ್ಡಿಪಡಿಸಬಾರದು ಎಂದು ಗಂಡ ತನ್ನ ಹೆಂಡ್ತಿಗೆ ಇನ್ನೊಂದು ಮದುವೆ ಮಾಡಿಸಿದ್ದಾನೆ. ಮದುವೆಯ ನಂತರ ಆಕೆಯ ಜವಾಬ್ದಾರಿ ಸಂಪೂರ್ಣ ನಿನ್ನದೇ ಎಂದು ಹೇಳಿ ಕನ್ಯಾದಾನ ಮಾಡಿದ್ದಾನೆ.