ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ನಾಗುರಿ ಪರಿಸರದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ವಹಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಸ್ಫೋಟ ಸಂಭವಿಸಿದ ನಂತರದಲ್ಲಿ ರಾಜ್ಯ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿತ್ತು. ನವೆಂಬರ್ 20ರಂದು ಎಫ್‌ಐಆರ್ ದಾಖಲಾಗಿತ್ತು. ಉಗ್ರ ಶಾರಿಕ್‌ನನ್ನು ಪತ್ತೆ ಹಚ್ಚಿ, ಆತನ ಹಿನ್ನೆಲೆಯನ್ನೂ ರಾಜ್ಯ ಪೊಲೀಸರು ಬಯಲಿಗೆಳೆದಿದ್ದರು. ಇದು ಸಾಮಾನ್ಯ ಸ್ಫೋಟ ಅಲ್ಲ, ಭಯೋತ್ಪಾದಕ ಚಟುವಟಿಕೆ ಎನ್ನುವುದನ್ನು ಖಚಿತಪಡಿಸಿದ್ದರು.
ಇದೀಗ ಕೇಂದ್ರ ಗೃಹ ಸಚಿವಾಲಯ ಎನ್‌ಐಎ ಹೆಗಲಿಗೆ ತನಿಖೆಯ ಹೊಣೆ ನೀಡಿದೆ.