ಶಿವಾಜಿ ಹಳೇ ಕಾಲದ ಐಕಾನ್: ರಾಜ್ಯಪಾಲ ಕೋಶ್ಯಾರಿ ಹೇಳಿಕೆ ಪರ ಬ್ಯಾಟ್ ಬೀಸಿದ ಫಡ್ನವಿಸ್ ಪತ್ನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಛತ್ರಪತಿ ಶಿವಾಜಿ ಮಹಾರಾಜ ಹಳೇ ಕಾಲದ ಐಕಾನ್ ಎಂದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಸಿಎಂ ಏಕನಾಥ ಶಿಂಧೆ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ಮಧ್ಯೆಯೇ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರು ರಾಜ್ಯಪಾಲರ ಬೆಂಬಲಕ್ಕೆ ನಿಂತಿದ್ದಾರೆ.

ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ವ್ಯಕ್ತಿಗತವಾಗಿ ಬಲ್ಲೆ. ಮಹಾರಾಷ್ಟ್ರಕ್ಕೆ ಬಂದ ಮೇಲೆ ಅವರು ಮರಾಠಿ ಕಲಿತ್ತಿದ್ದಾರೆ. ಅವರು ನಿಜವಾಗಿಯೂ ಮರಾಠಿಗರನ್ನು ಇಷ್ಟಪಡುತ್ತಾರೆ. ಇದು ನನ್ನ ಅನುಭವಕ್ಕೆ ಬಂದಿದೆ. ಆದರೆ, ಬಹಳಷ್ಟು ಸಂದರ್ಭದಲ್ಲಿ ಅವರು ಹೇಳುವುದೇ ಒಂದು, ಅದು ಅರ್ಥವಾಗುವುದು ಇನ್ನೊಂದು. ಅವರ ಹೇಳಿಕೆಗಳನ್ನು ತಿರುಚಲಾಗುತ್ತದೆ. ಆದರೆ, ಅವರು ಹೃದಯದಲ್ಲಿ ಪಕ್ಕಾ ಮರಾಠಿ ಮನುಷ್ಯರಾಗಿದ್ದಾರೆ ಎಂದು ಅಮೃತಾ ಫಡ್ನವಿಸ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!