ಈ ರೀತಿ ಸುಲಭವಾಗಿ ಮ್ಯಾಂಗೋ ಮಿಲ್ಕ್ ಶೇಕ್ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಸಾಮಗ್ರಿಗಳು: 

* ಮಾಗಿದ ಮಾವಿನ ಹಣ್ಣಿನ ತುಂಡುಗಳು – 1 ಕಪ್
* ಹಾಲು – 1 1/2 ಕಪ್ (ಕುದಿಸಿ ತಣ್ಣಗಾಗಿಸಿ)
* ಸಕ್ಕರೆ – ರುಚಿಗೆ ತಕ್ಕಷ್ಟು
* ಐಸ್ ಕ್ಯೂಬ್ಸ್ – ಸ್ವಲ್ಪ

ಮಾಡುವ ವಿಧಾನ:

ಮೊದಲು ಮಿಕ್ಸರ್ ಜಾರ್‌ನಲ್ಲಿ ಮಾವಿನ ಹಣ್ಣಿನ ಪೀಸ್‌, ಸಕ್ಕರೆ, 1 1/2 ಕಪ್ ಹಾಲು ಸುರಿಯಿರಿ. ನಂತರ ಅದರಲ್ಲಿ ಐಸ್ ತುಂಡುಗಳನ್ನು ಹಾಕಿ ಮುಚ್ಚಿ ಚೆನ್ನಾಗಿ ರುಬ್ಬಿಕೊಂಡರೆ ರುಚಿಯಾದ ಮಾವಿನ ಮಿಲ್ಕ್ ಶೇಕ್ ರೆಡಿ.

ಇಷ್ಟ ಪಡುವವರು ಈ ಮಾವಿನ ಮಿಲ್ಕ್ ಶೇಕ್ ಮೇಲೆ ನುಣ್ಣಗೆ ರುಬ್ಬಿದ ಬಾದಾಮಿ, ಗೋಡಂಬಿ, ಪಿಸ್ತಾಗಳನ್ನು ಉದುರಿಸಬಹುದು.
ಇಲ್ಲದಿದ್ದರೆ ಮೇಲೆ ಐಸ್ ಕ್ರೀಮ್ ಅಥವಾ ಮಾವಿನ ಹೋಳುಗಳನ್ನು ಇರಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!