September 30, 2026
Wednesday, September 30, 2026
spot_img

Mango Tiramisu | ಮ್ಯಾಂಗೋ ತಿರಮಿಸು ತಿಂದು ಬೇಸಿಗೆಯ ಬಿಸಿಯನ್ನು ಮಾಯ ಮಾಡಿ

ಬಿಸಿಲಿನ ಬೇಗೆಯಲ್ಲಿ ತಂಪಾದ, ಸಿಹಿಯಾದ ಡೆಸರ್ಟ್ ತಿನ್ನಬೇಕು ಅನ್ನಿಸಿದರೆ ಮ್ಯಾಂಗೋ ತಿರಮಿಸು ಟ್ರೈ ಮಾಡಿ. ಬೇಯಿಸದೇ ಸುಲಭವಾಗಿ ಮಾಡಬಹುದಾದ ಈ ಇಟಾಲಿಯನ್ ಸ್ಟೈಲ್ ಸಿಹಿ ನಿಮ್ಮ ಮನಸ್ಸು ಗೆಲ್ಲೋದು ಗ್ಯಾರಂಟಿ.

ಬೇಕಾಗುವ ಪದಾರ್ಥಗಳು:

ಮಾವಿನ ಹಣ್ಣು – 2
ಸಕ್ಕರೆ – 3 ರಿಂದ 4 ಚಮಚ
ಹೆವಿ ಕ್ರೀಮ್ – 1 ಕಪ್
ಕ್ರೀಮ್ ಚೀಸ್ – 1 ಕಪ್
ಮಿಲ್ಕ್ ಬಿಸ್ಕತ್ – 10 ರಿಂದ 12
ಮಾವಿನ ತುಂಡುಗಳು – ಅಲಂಕಾರಕ್ಕೆ
ಏಲಕ್ಕಿ ಪುಡಿ – ಚಿಟಿಕೆ

ಮಾಡುವ ವಿಧಾನ:

ಮೊದಲು ಮಾವಿನ ಹಣ್ಣಿನ ತುಂಡುಗಳನ್ನು ಮಿಕ್ಸಿಯಲ್ಲಿ ಹಾಕಿ ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿ ಪಲ್ಪ್ ತಯಾರಿಸಿಕೊಳ್ಳಿ. ನಂತರ ಒಂದು ಬೌಲ್‌ನಲ್ಲಿ ಹೆವಿ ಕ್ರೀಮ್, ಚೀಸ್ ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ವಿಪ್ ಮಾಡಿ ಮೃದುವಾದ ಕೆನೆ ಸಿದ್ಧಪಡಿಸಿ.

ಈಗ ಒಂದು ಟ್ರೇ ತೆಗೆದುಕೊಂಡು ಬಿಸ್ಕತ್‌ಗಳನ್ನು ಮಾವಿನ ಪಲ್ಪ್‌ನಲ್ಲಿ ಲಘುವಾಗಿ ಅದ್ದಿ ಜೋಡಿಸಿ. ಅದರ ಮೇಲೆ ಕೆನೆ ಮಿಶ್ರಣ ಹರಡಿ. ಮತ್ತೆ ಇದೇ ರೀತಿ ಮತ್ತೊಂದು ಪದರ ಹಾಕಿ. ಕೊನೆಯಲ್ಲಿ ಮೇಲ್ಭಾಗಕ್ಕೆ ಮಾವಿನ ತುಂಡುಗಳನ್ನು ಅಲಂಕರಿಸಿ.

ಇದನ್ನು 4-5 ಗಂಟೆ ಫ್ರಿಜ್‌ನಲ್ಲಿ ಇಟ್ಟು ತಂಪಾದ ಬಳಿಕ ಸವಿದರೆ ರುಚಿ ಡಬಲ್. ಬೇಸಿಗೆಯಲ್ಲಿ ಮನೆಯವರ ಮನ ಗೆಲ್ಲುವ ತಂಪಾದ ಸಿಹಿ ಇದಾಗಿದೆ.

Must Read