‘ಇಬ್ಬರು ಒಟ್ಟಿಗೇ ಕುಳಿತುಕೊಳ್ಳೋಕು ಬಿಡ್ತಿರ‍್ಲಿಲ್ಲ ಮಣಿ ರತ್ನಂ ಸರ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೊನ್ನಿಯಿನ್ ಸೆಲ್ವಂ ಸಿನಿಮಾದಲ್ಲಿ ತ್ರಿಶಾ ಹಾಗೂ ಐಶ್ವರ್ಯಾ ರೈ ನಟಿಸುತ್ತಿದ್ದಾರೆ.
ಮಣಿ ರತ್ನಂ ನಿರ್ದೇಶನದ ಈ ಸಿನಿಮಾದಲ್ಲಿ ಇವರಿಬ್ಬರು ವಿರೋಧಿಗಳಾಗಿ ನಟಿಸುತ್ತಿದ್ದಾರೆ. ಮಣಿರತ್ನಂ ಅವರ ನಿರ್ದೇಶನದ ಬಗ್ಗೆ ತ್ರಿಶಾ ಮಾತನಾಡುತ್ತಾ, ಸರ್ ನಾನು ಹಾಗೂ ಐಶ್ವರ್ಯ ಅವರು ಸ್ನೇಹಿತರಾಗೋದನ್ನು ತಪ್ಪಿಸುತ್ತಾ ಇದ್ದರು ಎಂದು ಹೇಳಿಕೊಂಡಿದ್ದಾರೆ.

ನಾವಿಬ್ಬರೂ ಸಿನಿಮಾದಲ್ಲಿ ವಿರೋಧಿಗಳು, ಹಾಗಾಗಿ ಸೆಟ್‌ನಲ್ಲೂ ಮಿಂಗಲ್ ಆಗೋದಕ್ಕೆ ಬಿಡ್ತಿರಲಿಲ್ಲ. ಸ್ನೇಹದ ಛಾಯೆ ಕೂಡ ಕ್ಯಾರೆಕ್ಟರ್‌ನಲ್ಲಿ ಬೇಡ ಅನ್ನೋದು ಅವರ ಆಶಯ ಎಂದು ಹೇಳಿದ್ದಾರೆ.

Trisha and Aishwarya Rai are playing Kundavai and Nandini respectively, in Ponniyin Selvanಆದರೆ ಐಶ್ವರ್ಯಾ ರೈ ನೋಡೋದಕ್ಕೆಷ್ಟು ಸುಂದರವೋ, ಅವರ ಮನಸ್ಸೂ ಕೂಡ ಹಾಗೆ, ಅವರ ಸ್ನೇಹ ಬೆಳೆಸದೇ ಇರುವುದು ಅಸಾಧ್ಯ ಎಂದು ತ್ರಿಶಾ ಹೇಳಿಕೊಂಡಿದ್ದಾರೆ. ಸರ್ ನಮ್ಮನ್ನು ಎಷ್ಟೇ ದೂರ ಮಾಡಿದ್ರು ನಾವಿಬ್ಬರೂ ಒಳ್ಳೆ ಸ್ನೇಹಿತರಾಗಿದ್ದೇವೆ. ಸೆಟ್‌ನಲ್ಲಿ ಸ್ನೇಹಿತರು, ಸಿನಿಮಾದಲ್ಲಿ ದ್ವೇಷಿಗಳು ಈ ವ್ಯತ್ಯಾಸ ಇಬ್ಬರೂ ಚೆನ್ನಾಗಿ ಅರಿತುಕೊಂಡಿದ್ದೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!