ಮಣಿಪುರ ಹಿಂಸಾಚಾರ: ಉದ್ರಿಕ್ತರಿಂದ ಆಂಬುಲೆನ್ಸ್‌ಗೆ ಬೆಂಕಿ, ಬಾಲಕ ಸೇರಿ ಮೂವರ ದಾರುಣ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್‌ಗೆ ಬೆಂಕಿ ಹಚ್ಚಿದ್ದು, ಬಾಲಕನ ಜೊತೆಗೆ ಬಾಲಕನ ತಾಯಿ ಹಾಗೂ ಸಂಬಂಧಿಕರು ಸಾವನ್ನಪ್ಪಿರುವ ದಾರುಣ ಘಟನೆ ಮಣಿಪುರದಲ್ಲಿ ನಡೆದಿದೆ. ಭಾನುವಾರ ಸಂಜೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೀನಾ ಹಂಸಿಂಗ್ (45) ಅವರ ಮಗ ಸೇರಿದ್ದಾರೆ ತೋನ್ಸಿಂಗ್ (8) ಮತ್ತು ಅವರ ಸೋದರ ಸಂಬಂಧಿ ಲಿಡಿಯಾ (37)ಮೃತ ದುರ್ದೈವಿಗಳು. ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿದ್ದು ಉದ್ರಿಕ್ತರಿಂದ ಈ ಹೇಯ ಕೃತ್ಯ ನಡೆದಿದೆ.

ಎಂಟು ವರ್ಷದ ಬಾಲಕ ತೋನ್ಸಿಂಗ್ ಪುನರ್ವಸತಿ ಕೇಂದ್ರದಲ್ಲಿ ತನ್ನ ಗೆಳೆಯರೊಂದಿಗೆ ಆಟವಾಡುತ್ತಿದ್ದಾಗ ಗುಂಡೊಂದು ಬಂದು ಬಾಲಕನ ತಲೆ ಹೊಕ್ಕಿದೆ. ಕೂಡಲೇ ಭದ್ರತಾ ಸಿಬ್ಬಂದಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿದರು ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಭದ್ರತಾ ಪಡೆಗಳು ಸ್ವಲ್ಪ ದೂರ ತಲುಪಿದ ಬಳಿಕ ಜವಾಬ್ದಾರಿಯನ್ನು ಮಣಿಪುರ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಈ ವೇಳೆ ಉದ್ರಿಕ್ತರು ಆಂಬುಲೆನ್ಸ್‌ಗೆ ಬೆಂಕಿ ಹಚ್ಚಿದ್ದಾರೆ.

ಬೆಂಕಿ ಆಂಬ್ಯುಲೆನ್ಸ್‌ಗೆ ಆವರಿಸುತ್ತಿದ್ದಂತೆ ಸಿಬ್ಬಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಹಾಂಸಿಂಗ್, ತೋನ್ಸಿಂಗ್ ಮತ್ತು ಲಿಂಡಿಯಾ ಆಂಬುಲೆನ್ಸ್‌ನಲ್ಲಿ ಸಜೀವ ದಹನವಾಗಿದ್ದಾರೆ. ಈ ಘಟನೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!