ಡಿಕೆ ಸಹೋದರರ ದೌರ್ಜನ್ಯ ನಿಲ್ಲಿಸಲು ಚುನಾವಣಾ ಅಖಾಡಕ್ಕಿಳಿದ ಮಂಜುನಾಥ್: ಮಾಜಿ ಪ್ರಧಾನಿ ದೇವೇಗೌಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಾ. ಸಿಎನ್ ಮಂಜುನಾಥ್ (D CN Manjunath)ನನ್ನ ಅಳಿಯ ಎಂಬ ಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಜಯದೇವ ಸಂಸ್ಥೆಯನ್ನು ಇಡೀ ದೇಶದಲ್ಲಿ ಎತ್ತರಕ್ಕೆ ಬೆಳೆಸಿದ ಕೀರ್ತಿ ಅವರದ್ದಾಗಿದೆ. ಅವರು ನಮ್ಮ ಪಕ್ಷದಿಂದಲೇ ಸ್ಪರ್ಧಿಸಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.ಆ ಅಣ್ಣ ತಮ್ಮರ (ಡಿಕೆ ಸಹೋದರರ) ದೌರ್ಜನ್ಯ ಏನಿದೆ, ಅದನ್ನು ನಿಲ್ಲಿಸಲೇಬೇಕು ಎಂದು ಮಂಜುನಾಥ್​​ರನ್ನು ಕಣಕ್ಕಿಳಿಸಿದ್ದಾರೆ. ಅರ್ಥ ಮಾಡಿಕೊಳ್ಳಿ’ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ (HD Deve Gowda) ಹೇಳಿದರು.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಮಂಚಿಗನಹಳ್ಳಿ ಗ್ರಾಮದಲ್ಲಿ ಪ್ರಜ್ವಲ್ ಪರ ಮತಯಾಚನೆ ಮಾಡಿದ ಅವರು, ಡಿಕೆ ಸಹೋದರರ ವಿರುದ್ಧವೂ ವಾಗ್ದಾಳಿ ನಡೆಸಿದರು.

ಇಡೀ ಬೆಂಗಳೂರು ಅವರ ಕೈಯಲ್ಲಿದೆ. ನೀವು ವಿದ್ಯಾವಂತರು ಅರ್ಥಮಾಡಿಕೊಳ್ಳಬೇಕು. ಬಿಡಿಎ, ಕಾರ್ಪೊರೇಷನ್​ನಿಂದ ಬಾಚಿ ತೆಗೆದುಕೊಂಡು ಅದನ್ನು ಬೇರೆ ರಾಜ್ಯಗಳಿಗೆ ಕೊಡುತ್ತಾರೆ. ಅವರು ಕೆಪಿಸಿಸಿ ಅದ್ಯಕ್ಷರು ಕಡಿಮೆ ಏನಲ್ಲ. ಮಹಾತ್ಮ ಗಾಂಧಿ ಕಟ್ಟಿದ ಕಾಂಗ್ರೆಸ್ ಅಧ್ಯಕ್ಷರದ್ದು ಎಂತಹ ವ್ಯಕ್ತಿತ್ವ ಅದು ಎಂದು ಡಿಕೆ ಶಿವಕುಮಾರ್ ಹೆಸರು ಹೇಳಿ ದೇವೇಗೌಡರು ವ್ಯಂಗ್ಯವಾಡಿದರು.

ಈ ವೇಳೆ ಶಾಸಕ ಹೆಚ್​ಡಿ ರೇವಣ್ಣ ಅವರನ್ನು ಹೊಗಳಿದ ದೇವೇಗೌಡರು, ರಾಜ್ಯದಲ್ಲಿ ಇಷ್ಟೊಂದು ಕೆಲಸ ಮಾಡುವ ಯಾವುದೇ ಶಾಸಕ ಇಲ್ಲ. ಯಾರಾದರು ಇದ್ದರೆ ಅವರು ನನ್ನ ಮುಂದೆ ಬಂದು ನಿಲ್ಲಬಹುದು. ನೀವು ಹಾಸನದ ಖಾಸಗಿ ಇಂಜಿನಿಯರಿಂಗ್ ಕಾಲೇಜಿಗೆ ಹೋಗಿ ಫೀಜ್ ಕೇಳಿ ಎಷ್ಟು ಹೇಳ್ತಾರೆ ನೋಡಿ. ರೇವಣ್ಣ ತಮ್ಮ ಕ್ಷೇತ್ರದ ಮೊಸಳೆಹೊಸಳ್ಲಿಯಲ್ಲಿ ಒಂದು ಇಂಜಿನಿಯರಿಂಗ್ ಕಾಲೇಜು ಮಾಡಿದರು. ಹಳ್ಳಿಯಲ್ಲಿ ಕಾಲೇಜು ಬೇಡಾ ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ ಹಠ ಹಿಡಿದು ಅಲ್ಲಿ ಕಾಲೇಜು ಸ್ಥಾಪನೆ ಮಾಡಿದರು. ಅಲ್ಲಿ ಕೇವಲ ಐದು ಸಾವಿರಕ್ಕೆ ಸೀಟ್ ಸಿಗುತ್ತದೆ ಎಂದು ಹೇಳಿದರು.

ರೇವಣ್ಣ ದೊಡ್ಡ ವಿದ್ಯಾವಂತ ಅಲ್ಲ. ಅವನು ಕೇವಲ ಎಸ್​​ಎಸ್ ಎಲ್​​ಸಿ ಅಷ್ಟೆ. ಹಿಂದೆ ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರ ಮಾಡಿದ್ದಾಗ ಎಷ್ಟು ಷರತ್ತು ಹಾಕಿದ್ದರು. ಕುಮಾರಸ್ವಾಮಿ ಸಾಲ‌ಮನ್ನಾ ಮಾಡುತ್ತೇನೆ ಅಂದರೆ ನಮ್ಮ ಯೋಜನೆಗೆ ಮೊದಲು ಹಣ ಇಡಿ ಎಂದರು. ಸಿಎಂ ಸಿದ್ದರಾಮಯ್ಯ ಏಪ್ರಿಲ್ 18 ಕ್ಕೆ ಬರ್ತಾರಂತೆ. ನಾನು ಅವರನ್ನೇ ಫಾಲೋ ಮಾಡ್ತೇನೆ, ಮಾತನಾಡಲಿ ನೊಡೋಣ ಎಂದು ದೇವೇಗೌಡರು ಸವಾಲು ಹಾಕಿದರು.

ನಾನು ಬಂದಿರುವುದು ಒಬ್ಬ ರೇವಣ್ಣರನ್ನು ಗೆಲ್ಲಿಸಲು ಅಲ್ಲ. ತುಮಕೂರಿಗೆ ಹೋಗ್ತೇನೆ, ಅಲ್ಲಿ ಸೋಮಣ್ಣ ಗೆಲ್ಲಬೇಕು. ಮೈಸೂರಿಗೆ ಹೋಗ್ತೇನೆ ಅಲ್ಲಿ ಮಹರಾಜರು ಗೆಲ್ಲಬೇಕು. ಮಂಡ್ಯಕ್ಕೆ ಹೋಗ್ತೇನೆ ಅಲ್ಲಿ ಕುಮಾರಸ್ವಾಮಿ ಗೆಲ್ಲಬೇಕು ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!