SHOCKING | ಶಾಪಿಂಗ್‌ ಮಾಲ್‌ ಗೆ ನುಗ್ಗಿ ಐವರನ್ನು ಕೊಂದ ದುಷ್ಕರ್ಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವ್ಯಕ್ತಿಯೊಬ್ಬ ಬ್ಯುಸಿ ಶಾಪಿಂಗ್‌ ಮಾಲ್‌ನಲ್ಲಿ ಸಿಕ್ಕಸಿಕ್ಕವರಿಗೆ ಚೂರಿ ಇರಿದಿದ್ದಾನೆ.

ಶಾಪಿಂಗ್ ಮಾಲ್ ಗೆ ಏಕಾಏಕಿ ನುಗ್ಗಿದ ದುಷ್ಕರ್ಮಿಯೊಬ್ಬ ಐರನ್ನು ಚಾಕುವುನಿಂದ ಇರಿದು ಹತ್ಯೆ ಮಾಡಿದ್ದಾನೆ.
ಇನ್ನು ಈತನನ್ನು ಬಂಧಿಸಲು ಪೊಲೀಸರು ಪ್ರಯತ್ನ ಮಾಡಿದಾಗ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಪೊಲೀಸರ ಗುಂಡಿನ ದಾಳಿಯಲ್ಲಿ ಈತ ಹತನಾಗಿದ್ದಾನೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿದೆ.

ಚೂರಿ ಇರಿತ ಮತ್ತು ಗುಂಡಿನ ದಾಳಿ ನಡೆದ ಕಾರಣ ಬೋಂಡಿ ಬೀಚ್ ಬಳಿಯ ವೆಸ್ಟ್‌ಫೀಲ್ಡ್ ಬೋಂಡಿ ಜಂಕ್ಷನ್‌ನಿಂದ ನೂರಾರು ಜನರನ್ನು ಸ್ಥಳಾಂತರಿಸಲಾಗಿದೆ. ಇನ್ನು ಎಂಟು ಮಂದಿ ಗಾಯಗೊಂಡಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.

ಶಂಕಿತ ವ್ಯಕ್ತಿಯನ್ನು ನ್ಯೂ ಸೌತ್ ವೇಲ್ಸ್ ಪೋಲಿಸ್‌ನ ಮಹಿಳಾ ಅಧಿಕಾರಿಯೊಬ್ಬರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಈ ದಾಳಿಯು ನಗರದ ಪೂರ್ವ ಉಪನಗರಗಳಲ್ಲಿ ಮಧ್ಯಾಹ್ನ 3:40 ರ ಸುಮಾರಿಗೆ (ಸ್ಥಳೀಯ ಕಾಲಮಾನ) ನಡೆದಿದೆ. ಚೂರಿ ಇರಿದು ಸಾಕಷ್ಟು ಮಂದಿ ಗಾಯಗೊಂಡ ಬೆನ್ನಲ್ಲಿಯೇ 4 ಗಂಟೆ ವೇಳೆಗೆ ಎಮರ್ಜೆನ್ಸಿ ಸರ್ವೀಸ್‌ಅನ್ನು ಕರೆಸಲಾಗಿತ್ತು.

ಸಾಮಾಜಿಕ ಮೀಡಿಯಾದಲ್ಲಿನ ಹಲವು ಪೋಸ್ಟ್‌ಗಳು ಜನರು ಭಯಭೀತರಾಗಿ ಮಾಲ್‌ನಿಂದ ಹೊರಬರುತ್ತಿರುವ ವಿಡಿಯೋಗಳನ್ನು ಪೋಸ್ಟ್‌ ಮಾಡಿದ್ದಾರೆ. ಅದರೊಂದಿಗೆ ಪೊಲೀಸ್ ಕಾರುಗಳು ಮತ್ತು ತುರ್ತು ಸೇವೆಗಳು ತಕ್ಷಣವೇ ಮಾಲ್‌ ಬಳಿ ಬಂದಿದ್ದವು. ಆಸ್ಟ್ರೇಲಿಯನ್ ಫೆಡರಲ್ ಪೋಲೀಸ್ (AFP) ಸಿಡ್ನಿಯಲ್ಲಿ ನಡೆದ ದಾಳಿಯ ಬಗ್ಗೆ ಕ್ಯಾನ್‌ಬೆರಾದಲ್ಲಿ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್‌ಗೆ ವಿವರಣೆ ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!