ಹೊಸದಿಗಂತ ಡಿಜಿಟಲ್ ಡೆಸ್ಕ್:
AI ಇಂಪ್ಯಾಕ್ಟ್ ಸಮಿಟ್ 2026 ಭಾರತದ ಹೊಸ ತಂತ್ರಜ್ಞಾನಗಳ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದ 131ನೇ ಸಂಚಿಕೆಯಲ್ಲಿ ಮಾತನಾಡಿದ ಅವರು, ಎಐ ಪಶು ಚಿಕಿತ್ಸೆಯಿಂದ ಹಿಡಿದು ಹಾಲು ಉತ್ಪಾದನೆ ಮೇಲ್ವಿಚಾರಣೆವರೆಗೂ ರೈತರಿಗೆ 24×7 ನೆರವು ನೀಡುತ್ತಿದೆ ಎಂದು ಉಲ್ಲೇಖಿಸಿದರು.
ಭಾರತೀಯ ಉತ್ಪಾದಕರು ಹಾಗೂ ಸ್ಟಾರ್ಟ್‌ಅಪ್‌ಗಳು ‘ಶೂನ್ಯ ದೋಷ’ ಮತ್ತು ಉನ್ನತ ಗುಣಮಟ್ಟದ ಉತ್ಪನ್ನಗಳತ್ತ ಗಮನಹರಿಸಬೇಕು. ಜಾಗತಿಕ ಮಟ್ಟದಲ್ಲಿ ಗೌರವಿಸಲ್ಪಡುವ ವಸ್ತುಗಳು ಮತ್ತು ಸೇವೆಗಳನ್ನು ದೇಶ ತಯಾರಿಸಬೇಕು ಎಂದು ಪ್ರಧಾನಿ ಕರೆ ನೀಡಿದರು. ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ, ಸೆಮಿಕಂಡಕ್ಟರ್ ಮತ್ತು ಹಸಿರು ಶಕ್ತಿ ಕ್ಷೇತ್ರಗಳಲ್ಲಿ ಯುವಕರಿಗೆ ಅಪಾರ ಅವಕಾಶಗಳಿವೆ ಎಂದರು.
ಇದನ್ನೂ ಓದಿ:
ಇದೇ ವೇಳೆ ಕೇರಳದ ಆಲಿನ್ ಶೆರಿನ್ ಅಬ್ರಹಾಂ ಅವರ ಅಂಗದಾನವನ್ನು ಸ್ಮರಿಸಿ ಕುಟುಂಬದ ಮಾನವೀಯತೆಯನ್ನು ಪ್ರಶಂಸಿಸಿದರು. ಡಿಜಿಟಲ್ ವಂಚನೆ ಪ್ರಕರಣಗಳ ಬಗ್ಗೆ ಎಚ್ಚರಿಕೆ ನೀಡಿದ ಅವರು, KYC ಪ್ರಕ್ರಿಯೆ ಹಾಗೂ ಆನ್‌ಲೈನ್ ಸುರಕ್ಷತೆ ಕುರಿತು ಜಾಗೃತಿಯ ಅಗತ್ಯವಿದೆ ಎಂದರು.
ಫೆಬ್ರವರಿ 24ರಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜನ್ಮದಿನದ ಅಂಗವಾಗಿ ಗೌರವ ನಮನ ಸಲ್ಲಿಸಿದ ಮೋದಿ, ಜನಸೇವೆಗಾಗಿಯೇ ಜೀವನ ಅರ್ಪಿಸಿದ ನಾಯಕರನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.



