ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಹಿಂದು ಸೇವಾ ಪ್ರತಿಷ್ಠಾನದ ಪ್ರಕಲ್ಪವಾದ ಬೌಧಿಕ ಸವಾಲು ಹಾಗೂ ಬಹು ನ್ಯೂನತೆ ಹೊಂದಿರುವ ದಿವ್ಯಾಂಗ ಮಕ್ಕಳ ಪುನಶ್ಚೇತನ ಕೇಂದ್ರ ‘ಮನೋನಂದನ ಕೇಂದ್ರ’ದ ರಜತ ಮಹೋತ್ಸವ ಸಮಾರಂಭವು ಮಾ. 9 ಮತ್ತು 10ರಂದು ಜರಗಲಿದೆ.
ಬೆಂಗಳೂರು ಕೆ.ಆರ್. ರಸ್ತೆಯ ಟಾಟಾ ಸಿಲ್ಕ್ ಫಾರ್ಮ್ ಬಳಿಯ 3ನೇ ಮುಖ್ಯರಸ್ತೆಯಲ್ಲಿರುವ ಮನೋನಂದನ ಕೇಂದ್ರದಲ್ಲಿ ಮಾ. 9ರಂದು ಬೆಳಗ್ಗೆ 10ಗಂಟೆಗೆ ತೆರೆದ ಮನೆ ಉದ್ಘಾಟನೆಯನ್ನು ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಕುಮಾರ್ ನಡೆಸಲಿದ್ದಾರೆ. ಮಾ. 10ರಂದು ಬೆಳಗ್ಗೆ 10ಗಂಟೆಗೆ ಬೆಂಗಳೂರು ನಗರ ಕೇಂದ್ರ ವಿಭಾಗದ ಡೆಪ್ಯುಟಿ ಕಮಿಷನರ್ ಎಂ.ಎನ್. ಅನುಚೇತ್ ಉದ್ಘಾಟಿಸಲಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ