ಜಗತ್ತಿಗೆ ಲಸಿಕೆ ನೀಡಿದ ಭಾರತ ಪ್ರಪಂಚದ ಅತಿದೊಡ್ಡ ಔಷಧಾಲಯ: ಮಾಂಡವೀಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

“ಕೊರೋನಾ ಸಂದರ್ಭದಲ್ಲಿ ತನ್ನ ಅವಶ್ಯಕತೆಯನ್ನು ಪೂರೈಸಿಕೊಂಡು ಜಗತ್ತಿಗೆ ಲಸಿಕೆ ನೀಡುವ ಮೂಲಕ ಭಾರತವು ಜಗತ್ತಿನ ಅತಿದೊಡ್ಡ ಔಷಧಾಲಯವಾಗಿ ಹೊರಹೊಮ್ಮಿದೆ” ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನಸುಖ್‌ ಮಾಂಡವೀಯ ಹೇಳಿದ್ದಾರೆ.

ಏಪ್ರಿಲ್‌ 25 ರಂದು ದೆಹಲಿಯಲ್ಲಿ ನಡೆಯಲಿರುವ 7ನೇ ಭಾರತೀಯ ಔಷಧ ಮತ್ತು ವೈದ್ಯಕೀಯ ಸಮ್ಮೇಳನ 2022 ರ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು “ಭಾರತವು ಜಗತ್ತಿನ ಅತಿ ದೊಡ್ಡ ಲಸಿಕಾ ಉತ್ಪಾದಕನಾಗಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ 17 ಕೋಟಿಗೂ ಹೆಚ್ಚು ಲಸಿಕೆಗಳನ್ನು ಭಾರತ ರಪ್ತು ಮಾಡುವ ಮೂಲಕ 100 ಕ್ಕೂ ಹೆಚ್ಚು ದೇಶಗಳಿಗೆ ಸಹಾಯ ಮಾಡಿದೆ. ತನ್ನ ಅವಶ್ಯಕತೆಯನ್ನು ಪೂರೈಸಿಕೊಂಡು ಜಾಗತಿಕ ಲಸಿಕಾ ಕೊರತೆಯನ್ನು ನೀಗಿಸಿರುವ ಭಾರತ ಜಗತ್ತಿನ ದೊಡ್ಡಔಷಧಾಲಯವಾಗಿ ಹೊರಹೊಮ್ಮಿದೆ.” ಎಂದಿದ್ದಾರೆ.

“ಆರೋಗ್ಯ ಕ್ಷೇತ್ರವು ವ್ಯಾಪಾರವಲ್ಲ ಬದಲಾಗಿ ಅದೊಂದು ಸೇವೆಯಾಗಿದೆ ಎಂದು ಭಾರತವು ಒತ್ತಿ ಹೇಳುತ್ತದೆ. ಕಡಿಮೆ ಬೆಲೆಯಲ್ಲಿ ದೊರೆಯುವ ಉತ್ತಮ ಗುಣಮಟ್ಟದ ಭಾರತೀಯ ಔಷಧಗಳ ಬಗ್ಗೆ ಹಲವು ದೇಶಗಳು ಮೆಚ್ಚುಗೆ ವ್ಯಕ್ತಪಡಿವೆ. ದಿನೇ ದಿನೇ ಅವುಗಳ ಬೇಡಿಕೆ ಹೆಚ್ಚಾಗುತ್ತಿದ್ದು 150 ಕ್ಕೂ ಹೆಚ್ಚಿನ ರಾಷ್ಟ್ರಗಳು ಭಾರತದಿಂದ ಔಷಧವನ್ನು ಆಮದು ಮಾಡಿಕೊಳ್ಳುತ್ತಿದೆ. ನೂತನ ಆವಿಷ್ಕಾರಗಳೊಂದಿಗೆ ಮುಂದಿನ ದಿನಗಳಲ್ಲಿ ವೈದ್ಯಕೀಯ ಪರಿಕರಗಳನ್ನೂ ಕೂಡ ಭಾರತವು ರಫ್ತು ಮಾಡಲಿದೆ” ಎಂದು ಹೇಳಿದ್ದಾರೆ.

ʼಇಂಡಿಯಾ ಫಾರ್ಮಾ ವಿಷನ್-‌2047: ಪರಿವರ್ತಕ ಭವಿಷ್ಯದ ಕಾರ್ಯಸೂಚಿಗಳುʼ ಎಂಬ ಧ್ಯೇಯದೊಂದಿಗೆ 3 ದಿನಗಳ ಕಾಲ ಸಮ್ಮೇಳನವು ನಡೆಯಲಿದ್ದು ಔಷಧ ಮತ್ತು ವೈದ್ಯಕೀಯ ವಿಭಾಗಗಳಲ್ಲಿನ ನೂತನ ಆವಿಷ್ಕಾರ ಮತ್ತು ಅಭಿವೃದ್ಧಿಯ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಭಾರತವನ್ನು ಆರೋಗ್ಯಕ್ಷೇತ್ರದಲ್ಲಿ ಜಾಗತಿಕ ನಾಯಕನನ್ನಾಗಿ ಮಾಡುವ ಕುರಿತು ಚಿಂತಿಸಲಾಗುತ್ತದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!