Wednesday, June 7, 2023

Latest Posts

ಮತದಾನದ ದಿನ ರಾಜ್ಯದಲ್ಲಿ ಹಲವು ಪ್ರವಾಸಿ ತಾಣಗಳು ಬಂದ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಮತದಾನದ ದಿನದಂದು ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಮತ ಚಲಾಯಿಸಲು ಮತದಾನದ ದಿನದಂದು ರಜೆ ನೀಡಿದ್ದು, ಜನ ವೋಟ್ ಮಾಡಲು ಹೋಗದೇ ಟ್ರಿಪ್ ಮಾಡುವ ಸಾಧ್ಯತೆಗಳಿದ್ದು, ಇದಕ್ಕೆ ಅವಕಾಶ ನೀಡದೇ ಮತದಾನ ಮಾಡಲು ಪ್ರೇರೇಪಿಸಲು ಪ್ರಮುಖ ತಾಣಗಳಲ್ಲಿ ನಿರ್ಬಂಧ ಹೇರಲಾಗಿದೆ.

ಶಿವಮೊಗ್ಗದಲ್ಲಿ ಚುನಾವಣಾ ಬಿಸಿ ಜೋರಾಗಿದ್ದು, ಜಗತ್‌ಪ್ರಸಿದ್ಧ ಜೋಗ ಜಲಪಾತಕ್ಕೆ ಮತದಾನ ದಿನವಾದ ಮೇ.10ರಂದು ಹೋಗುವಂತಿಲ್ಲ. ಇನ್ನು ಸಕ್ರೇಬೈಲು ಆನೆ ಬಿಡಾರದಲ್ಲಿಯೂ ಜನರಿಗೆ ಬರಲು ಅನುಮತಿ ಇಲ್ಲ.

ಹಂಪಿ, ಮೈಸೂರು, ಬಾದಾಮಿ, ಚಿಕ್ಕಮಗಳೂರಿನ ಕೆಲ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!