ರಾಹುಲ್ ಗಾಂಧಿ ದೇಶ ಬಿಟ್ಟು ಹೋಗಿ ಎಂದ ಮರಾಠಿ ನಟಿ ಮೇಘಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ಮರಾಠಿ ನಟಿ ‘ಬಿಗ್ ಬಾಸ್ ಮರಾಠಿ’ ಮೊದಲ ಸೀಸನ್‌ನ ವಿಜೇತೆ ಮೇಘಾ ಧಾಡೆ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಅವರ ಮೇಲೆ ಹರಿಹಾಯ್ದಿದ್ದಾರೆ.

ವೈರಲ್​ ವಿಡಿಯೋ ಒಂದಕ್ಕೆ ಕಮೆಂಟ್​ ಮಾಡಿರುವ ನಟಿ ರಾಹುಲ್​ ಅವರ ಮೇಲೆ ಕೆಂಡಾಮಂಡಲ ಆಗಿದ್ದಾರೆ. ಅದಕ್ಕೆ ಕಾರಣ ರಾಹುಲ್​ ಗಾಂಧಿಯವರು ತಮಗೆ ಉಡುಗೊರೆಯಾಗಿ ನೀಡಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜ್​ ಉಡುಗೊರೆಯನ್ನು ಕಡೆಗಣಿಸಿರುವುದು.

ಪುಣೆಯಲ್ಲಿ ನಡೆದ ಕಾರ್ಯಕ್ರಮದೊಂದರಲ್ಲಿ ಕಾಂಗ್ರೆಸ್ಸಿಗರು ರಾಹುಲ್ ಗಾಂಧಿವರಿಗೆ ಮಹಾರಾಷ್ಟ್ರದ ಆರಾಧ್ಯ ದೈವ ಛತ್ರಪತಿ ಶಿವಾಜಿ ಮಹಾರಾಜ್​ರ ವಿಗ್ರಹವನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ರಾಹುಲ್​ ಅದನ್ನು ಮುಟ್ಟಲೂ ಇಲ್ಲ. ಮಾತ್ರವಲ್ಲದೇ ಉಡುಗೊರೆಯನ್ನು ಅನುಮಾನದಿಂದ ನೋಡಿದರು, ಅದನ್ನು ಕೊಟ್ಟವರು ಫೋಟೋ ತೆಗೆಸಿಕೊಂಡ ಬಳಿಕ ರಾಹುಲ್​ ಗಾಂಧಿಯವರು ತೆಗೆದುಕೊಳ್ಳಲಿಲ್ಲ ಎನ್ನುವ ಕಾರಣಕ್ಕೆ ಟೇಬಲ್​ ಮೇಲೆ ಇಡಲು ಹೋದರು.

ಆ ಸಂದರ್ಭದಲ್ಲಿ ರಾಹುಲ್​ ಗಾಂಧಿ ಟೇಬಲ್​ ಮೇಲೆಯೂ ಅದನ್ನು ಇಡಲು ಕೊಡಲಿಲ್ಲ. ಇದನ್ನು ನೋಡಿದ ಹಲವು ಮಹಾರಾಷ್ಟ್ರಿಗರ ರಾಹುಲ್​ ಗಾಂಧಿ ವಿರುದ್ಧ ಸಾಕಷ್ಟು ಟೀಕೆ ಮಾಡಿದ್ದಾರೆ.

ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ನಟಿ. ‘ರಾಹುಲ್ ಗಾಂಧಿಯನ್ನು ಬೆಂಬಲಿಸುವವರಿಗೆ ನಾಚಿಕೆಯಾಗಬೇಕು. ರಾಹುಲ್ ಗಾಂಧಿ ನಾನು ನಿನ್ನನ್ನು ದ್ವೇಷಿಸುತ್ತೇನೆ. ನನ್ನ ದೇಶವನ್ನು ಬಿಟ್ಟು ನರಕಕ್ಕೆ ಹೋಗಿ’ ಎಂದು ಬರೆದಿದ್ದಾರೆ.

ಅಂದಹಾಗೆ ಮೇಘಾ ಅವರು, ಬಿಗ್ ಬಾಸ್ ವಿಜೇತೆ, ಖ್ಯಾತ ನಟಿ ಮಾತ್ರವಲ್ಲದೇ ರಾಜಕೀಯದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಇವರು ಬಿಜೆಪಿ ಸೇರಿದ್ದು, ರಾಜಕೀಯದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಇದೀಗ ನಟಿ ಶೇರ್​ ಮಾಡಿದ ವಿಡಿಯೋಕ್ಕೂ ಸಾಕಷ್ಟು ಮಂದಿ ಕಮೆಂಟ್​ ಹಾಕಿದ್ದು, ನಿಜವಾದ ಮಹಾರಾಷ್ಟ್ರಿಗರು ಇದನ್ನು ಸಹಿಸುವುದಿಲ್ಲ ಎನ್ನುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!