August 30, 2026
Sunday, August 30, 2026
spot_img

ಮರಾಠಿ ಭಾಷೆಯ ದಿನಪತ್ರಿಕೆ ಎಡವಟ್ಟು: ಬೆಳಗಾವಿಯಲ್ಲಿ ತೀವ್ರ ಪ್ರತಿಭಟನೆ

ಹೊಸದಿಗಂತ ವರದಿ ಬೆಳಗಾವಿ:

ಇಂದು ಮಹಾಮಾನವತಾವಾದಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಎನ್ನುವುದು ಜನಜನಿತ ಆದರೆ ಬೆಳಗಾವಿಯ ಅನ್ಯಭಾ಼ಷಿಕ ಸ್ಥಳೀಯ ದಿನಪತ್ರಿಕೆಯೊಂದು ಮಾಡಿದ ಗಂಭೀರ ಲೋಪದಿಂದ ಈಗ ಪ್ರತಿಭಟನೆ ಎದ್ದಿದೆ.

ನಗರದ ಮರಾಠಿ ಭಾಷಿಕ ಪತ್ರಿಕೆ ತನ್ನ ಬರಹದಲ್ಲಿ ಡಾ. ಅಂಬೇಡ್ಕರ್ ಜಯಂತಿ ಬದಲಾಗಿ ಬೇರೆ ಅರ್ಥವೂಲುವ ಪದಬಳಕೆ ಮಾಡಿರುವುದರಿಂದ ಎಂಬುವುದಾಗಿ ಬರೆದಿರುವುದರಿಂದ ಇಡೀ ದಲಿತ ಸಮಾಜ ದಿನಪತ್ರಿಕೆ ಕಚೇರಿ ಎದುರು ಪ್ರತಿಭಟನೆ ಆರಂಭಿಸಿದೆ.

ಮರಾಠಿ ಭಾಷಿಕರಲ್ಲಿ ಹೆಚ್ಚಿನ ಪ್ರಸರಣ ಹೊಂದಿರುವ ದಿನಪತ್ರಿಕೆ ಮಾಡಿರುವ ಈ ಎಡವಟ್ಟು ಪೊಲೀಸರಿಗೆ ಪೀಕಲಾಟ ತಂದಿದೆ.
ನಗರದ ಖಡೇಬಜಾರ್ ಪೊಲೀಸ್ ಠಾಣೆಯ ಎದುರಲ್ಲೇ ಇರುವ ಪತ್ರಿಕಾ ಮುಖ್ಯ ಕಾರ್ಯಾಲಯ ರಣರಂಗವಾಗಿ ಏರ್ಪಟ್ಟಿತು. ಸ್ಥಳಕ್ಕೆ ಪೊಲೀಸ್ ಆಯುಕ್ತ ಭೂ಼ಷಣ ಬೊರಸೆ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪ್ರತಿಭಟನಾಕಾರರನ್ನು ಶಾಂತಗೊಳಿಸುವ ಪ್ರಯತ್ನಿಸಿದರು. ‌

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !