ಸಿಲಿಕಾನ್ ಸಿಟಿಯಲ್ಲಿ ನಾಳೆ ಮ್ಯಾರಥಾನ್: ಬೆಳಗ್ಗೆ 3.30ರಿಂದ ಓಡಾಡಲಿದೆ ನಮ್ಮ ಮೆಟ್ರೋ!

ಹೊಸದಿಗಂತ ಡಿಜಿಟಲ್ ಡೆಸ್ಕ್;

ನಮ್ಮ ಮೆಟ್ರೋ ಭಾನುವಾರ (ಏ.27) ರಂದು ಬೆಳಗ್ಗೆ 6 ಗಂಟೆ ಬದಲಾಗಿ ನಸುಕಿನ ಜಾವ 3:30ಕ್ಕೆ ಆರಂಭವಾಗಲುದೆ. ಟಿಸಿಎಸ್​ ವರ್ಲ್ಡ್ 10ಕೆ-2025 ಮ್ಯಾರಥಾನ್​ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮೆಟ್ರೋ ಸಮಯ ವಿಸ್ತರಣೆ ಮಾಡಿದೆ.

ಟಿಸಿಎಸ್ ವರ್ಲ್ಡ್ 10ಕೆ-2025 ಮ್ಯಾರಥಾನ್‌ನ 17ನೇ ಆವೃತ್ತಿಯಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಅನುಕೂಲವಾಗುವಂತೆ, ಬಿಎಂಆರ್‌ಸಿಎಲ್ ಏಪ್ರಿಲ್ 27 ರ ಭಾನುವಾರ ಬೆಳಿಗ್ಗೆ, 3:30ಕ್ಕೆ ಮೆಟ್ರೋ ರೈಲು ಸೇವೆ ಪ್ರಾರಂಭವಾಗಲಿದೆ. ಇದು ಸಾಮಾನ್ಯ ಸಮಯಕ್ಕಿಂತ ಮೂರುವರೆ ಗಂಟೆಗಳ ಮುಂಚೆಯೇ ಪ್ರಾರಂಭವಾಗುತದೆ. ಈ ವಿಸ್ತ್ರತ ಅವಧಿಯಲ್ಲಿ ನಾಲ್ಕು ಮೆಟ್ರೋ ಟರ್ಮಿನಲ್ ಗಳು ಮತ್ತು ನಾಡಪ್ರಭು ಕೆಂಪೇಗೌಡ ನಿಲ್ಯಾಣ ಮೆಜೆಸ್ಟಿಕ್ ನಿಲ್ಯಾಣದಿಂದ ರೈಲುಗಳು 12 ನಿಮಿಷಗಳ ಅಂತರದಲ್ಲಿ ಚಲಿಸುತ್ತವೆ. ವರ್ಲ್ಡ್ಸ್​ ಪ್ರೀಮಿಯರ್​ 10K ಓಟದಲ್ಲಿ ಭಾಗವಹಿಸಲು ಮೇಲಿನ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಬಿಎಂಆರ್​​ ಸಿಎಲ್​ ವಿನಂತಿಸಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!