DO YOU KNOW | ಬೇಸಿಗೆಯಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಸುಸ್ತಾಗೋದಂತೆ! ಕಾರಣ ಏನು ಗೊತ್ತಾ?

ಬೇಸಿಗೆ ಋತುವಿನಲ್ಲಿ ಪ್ರತಿಯೊಬ್ಬರೂ ಶಾಖವನ್ನು ಅನುಭವಿಸುತ್ತಾರೆ ಮತ್ತು ಬೆವರು ಎಲ್ಲರನ್ನೂ ಕಾಡುತ್ತದೆ. ಆದರೆ ಮಹಿಳೆಯರು ಪುರುಷರಿಗಿಂತ ಜಾಸ್ತಿ ಶಾಖವನ್ನು ಅಥವಾ ಬಿಸಿಯನ್ನು ಅನುಭವಿಸುತ್ತಾರೆ ಮತ್ತು ಬೇಗನೆ ದಣಿದಿರುತ್ತಾರೆ ಯಾಕೆ ಅಂತ ಗೊತ್ತಾ? ಇಲ್ಲಿದೆ ಉತ್ತರ.

ಹಾರ್ಮೋನುಗಳಿಂದಾಗಿ ಮಹಿಳೆಯರು ಹೆಚ್ಚು ತೊಂದರೆ ಅನುಭವಿಸುತ್ತಾರೆ. ಜೊತೆಗೆ ಬೇಸಿಗೆಯಲ್ಲಿ ನಿಮಗೆ ಹೆಚ್ಚು ಬೆವರು ಬಂದಾಗ, ದೇಹವು ನೀರನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ನಿರ್ಜಲೀಕರಣವು ಎಲೆಕ್ಟ್ರೋಲೈಟ್‌ಗಳ ನಷ್ಟಕ್ಕೆ ಕಾರಣವಾಗುತ್ತದೆ, ಇದು ದೇಹದಲ್ಲಿ ಉಪ್ಪು ಮತ್ತು ನೀರಿನ ಸಮತೋಲನವನ್ನು ಕಡಿಮೆಗೊಳಿಸುತ್ತದೆ. ಈ ಕಾರಣದಿಂದ ಸ್ನಾಯುಗಳು ದುರ್ಬಲಗೊಳ್ಳುತ್ತವೆ ಮತ್ತು ದಣಿಯುತ್ತವೆ.

ಮಹಿಳೆಯರು ಬೇಗನೆ ದಣಿಯಲು ಒಂದು ದೊಡ್ಡ ಕಾರಣ ಮುಟ್ಟು. ಈ ಸಮಯದಲ್ಲಿ ಹಾರ್ಮೋನ್ ಮಟ್ಟಗಳು ಏರಿಳಿತಗೊಳ್ಳುತ್ತವೆ, ಇದು ಶಕ್ತಿಯ ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ.

ಮಹಿಳೆಯರ ಸಿರ್ಕಾಡಿಯನ್ ಲಯವು ಪುರುಷರಿಗಿಂತ 6 ನಿಮಿಷ ನಿಧಾನವಾಗಿರುತ್ತದೆ, ಆದರೆ ಅವರಿಗೆ 8 ನಿಮಿಷ ಹೆಚ್ಚು ನಿದ್ರೆಬೇಕಾಗುತ್ತದೆ. ಇದರಿಂದ ಅವರು ತಡವಾಗಿ ಮಲಗುತ್ತಾರೆ ಮತ್ತು ಬೇಗನೆ ಎಚ್ಚರಗೊಳ್ಳುತ್ತಾರೆ, ಇದು ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾರ್ಮೋನುಗಳ ಕಾರಣದಿಂದ ಪುರುಷರಿಗಿಂತ ಮಹಿಳೆಯರು ನಿದ್ರಾಹೀನತೆಯಿಂದ ಬಳಲುತ್ತಾರೆ.

ಬೇಸಿಗೆಯಲ್ಲಿ ಮಹಿಳೆಯರು ನಿಮ್ಮ ಜೀವನಶೈಲಿಯ ಬಗ್ಗೆ ಹೆಚ್ಚಿನ ಗಮನ ಕೊಡಿ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ. ಸಾಕಷ್ಟು ನೀರು ಕುಡಿಯಿರಿ. ಆಹಾರದಲ್ಲಿ ಜ್ಯೂಸ್, ತೆಂಗಿನ ನೀರು, ನಿಂಬೆ ರಸ, ಮುಂತಾದವುಗಳನ್ನು ಸೇವಿಸಿ . ಚನ್ನಾಗಿ ನಿದ್ರೆ ಮಾಡಿ. ಹಾಗೆ ಒತ್ತಡದ ಜೀವನದಿಂದ ದೂರವಿರಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!