ಮಾರ್ಚ್ ತಿಂಗಳಲ್ಲಿ ಕಾರ್ಪೋರೇಟ್ ಉದ್ಯೋಗಗಳಲ್ಲಿ ಭಾರಿ ಚೇತರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್ ಪ್ರೇರಿತ ನಿರ್ಬಂಧಗಳನ್ನು ತೆಗೆದುಹಾಕಿರುವ ಮತ್ತು ಆರ್ಥಿಕ ಚಟುವಟಿಕೆಯಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಭಾರತದ ನೇಮಕಾತಿ ಬೇಡಿಕೆಯು ವರ್ಷದಿಂದ ವರ್ಷಕ್ಕೆ 6% ಬೆಳವಣಿಗೆಯನ್ನು ಕಂಡಿದೆ ಎಂದು ಮಾನ್‌ಸ್ಟರ್ ಎಂಪ್ಲಾಯ್‌ಮೆಂಟ್ ಇಂಡೆಕ್ಸ್ (MEI) ತೋರಿಸಿದೆ.

ಮಾರ್ಚ ತಿಂಗಳು ಸಂಬಳ ಏರಿಕೆ ಸಮಯವಾದ್ದರಿಂದ ನೇಮಕಾತಿ ಪ್ರಕ್ರಿಯೆಯಲ್ಲಿ 2.4% ಕುಸಿತವಾಗಿದೆ. ಆದರೂ ವಿವಿಧ ಕ್ಷೇತ್ರಗಳಲ್ಲಿ ನೇಮಕಾತಿ ಚಟುವಟಿಕೆಯು ಮುಂದುವರೆದಿದೆ. ಹಾಗಾಗಿ ವಾರ್ಷಿಕ ದೃಷ್ಟಿಕೋನದಿಂದ ಸೂಚ್ಯಂಕವು ಧನಾತ್ಮಕವಾಗಿಯೇ ಉಳಿದುಕೊಂಡಿದೆ.

ಈ ಕುರಿತು ದೇಶದ 13 ನಗರಗಳಲ್ಲಿ ಸಮೀಕ್ಷೆ ಮಾಡಲಾಗಿದ್ದು ಅವುಗಳಲ್ಲಿ 11 ನಗರಗಳು ಕಳೆದ ವರ್ಷದ ಮಟ್ಟವನ್ನು ಮೀರಿದೆ. ಹಾಗೂ ಎಲ್ಲಾ ಮಹಾನಗರಗಳು ಎರಡಂಕಿಯ ಬೆಳವಣಿಗೆಯನ್ನು ದಾಖಲಿಸಿವೆ.

ವಾರ್ಷಿಕ ಆಧಾರದ ಮೇಲೆ ಮೊದಲ ಬಾರಿಗೆ ಮುಂಬೈ (21% ರಷ್ಟು) ಮುಂಚೂಣಿಯಲ್ಲಿದ್ದು ನಂತರ ಕೊಯಮತ್ತೂರು (20% ರಷ್ಟು), ಚೆನ್ನೈ ಮತ್ತು ಹೈದರಾಬಾದ್ ಗಳಲ್ಲಿ ತಲಾ (16%) ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಇ-ನೇಮಕಾತಿ ಚಟುವಟಿಕೆ (15% ರಷ್ಟು) ಧನಾತ್ಮಕ ಪ್ರವೃತ್ತಿಯನ್ನು ದಾಖಲಿಸಿದೆ. ಪುಣೆ 12% ಬೆಳವಣಿಗೆಯನ್ನು ದಾಖಲಿಸಿದರೆ, ಕೋಲ್ಕತ್ತಾ ಮತ್ತು ದೆಹಲಿ ತಲಾ 13% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಬೆಂಗಳೂರು ಮತ್ತು ಪುಣೆ ಫಿನ್‌ಟೆಕ್ ಸ್ಟಾರ್ಟ್-ಅಪ್‌ಗಳಿಗೆ ಸೆಕೆಂಡರಿ ಹಬ್‌ಗಳಾಗಿ ಹೊರಹೊಮ್ಮುತ್ತಿವೆ ಮತ್ತು ಮಾರುಕಟ್ಟೆಗಳಲ್ಲಿ ಲಭ್ಯವಿರುವ ಸುಪ್ತ ತಂತ್ರಜ್ಞಾನ ಪ್ರತಿಭೆಯನ್ನು ಪಡೆಯಲು ಹಲವಾರು ಉದ್ಯಮಿಗಳು ಬಯಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!