ಹೊಸದಿಗಂತ ಡಿಜಿಟಲ್ ಡೆಸ್ಕ್ :
ಉಡುಪಿ ಜಿಲ್ಲೆಯ ಬೆಳಪು ಗ್ರಾಮದ ವಿನಯ ನಗರ ಬಳಿ ಸಿಗರೇಟಿನೊಳಗೆ ಗಾಂಜಾ ಬೆರೆಸಿ ಸೇವಿಸುತ್ತಿದ್ದ ಇಬ್ಬರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ವಾಜಪೇಯಿ ಬಡಾವಣೆಯ ಉಮ್ಮರ್ ಅವರ ಮಗ ಸುಫಿಯಾನ (22) ಹಾಗು ಮುಸ್ತಾಕ್ (38) ವಶಕ್ಕೆ ಪಡೆದ ಆರೋಪಿಗಳು
ಪ್ರಕರಣ ವಿವರ:
ಫೆ. 23 ರಂದು ಬೆಳಗ್ಗೆ 10 ಗಂಟೆಗೆ ಬೆಳಪು ಗ್ರಾಮದ ವಿನಯ ನಗರ ಬಳಿ ಇಬ್ಬರು ಆರೋಪಿಗಳು ಸಿಗರೇಟ್ ನಲ್ಲಿ ಗಾಂಜಾವನ್ನು ಬೆರೆಸಿ ಸೇದುತ್ತಿದ್ದರು. ಈ ವೇಳೆ ಶಿರ್ವ ಪೋಲಿಸರು ಇಬ್ಬರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಶಿರ್ವ ಠಾಣೆಯಲ್ಲಿ ಎರಡು ಪತ್ಯೇಕ ಪ್ರಕರಣ ದಾಖಲಾಗಿದೆ.