Tuesday, March 28, 2023

Latest Posts

ಮುಷ್ಕರದ ನಡುವೆ ಕಡತ ಯಜ್ಞ ಮಾಡಿದ ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿ!

ಹೊಸದಿಗಂತ ವರದಿ, ಶಿವಮೊಗ್ಗ:

ರಾಜ್ಯ ಸರ್ಕಾರಿ ನೌಕರರ ಮುಷ್ಕರದ ಕರೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿಯೂ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಸ್ಥಗಿತವಾಗಿತ್ತು. ಇದರ ನಡುವೆಯೇ ಜಿಲ್ಲಾಧಿಕಾರಿಗಳು ಮಾತ್ರ ಕಡತ ವಿಲೇವಾರಿ ಯಜ್ಞ ಮಾಡಿ ಗಮನ ಸೆಳೆದರು.
ಜಿಲ್ಲಾಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್ ಸೇರಿದಂತೆ ಯಾವುದೇ ಕಚೇರಿಯಲ್ಲಿಯೂ ಮುಖ್ಯ ಅಧಿಕಾರಿಗಳನ್ನು ಹೊರತುಪಡಿಸಿ ಮಿಕ್ಕ ಸಿಬ್ಬಂದಿ ಕಂಡುಬರಲಿಲ್ಲಘಿ. ಆದರೆ ಕಚೇರಿಗಳು ಮಾತ್ರ ಬಾಗಿಲು ತೆರೆದಿದ್ದವು. ಕಚೇರಿ ಒಳಗಿನ ವಿವಿಧ ವಿಭಾಗಗಳು ಕೆಲವೆಡೆ ತೆರೆದಿದ್ದರೆ, ಕೆಲವು ಬಾಗಿಲು ಹಾಕಿಕೊಂಡಿದ್ದವು.
ಕಡತ ವಿಲೇವಾರಿ ಮಾಡಿದ ಡಿಸಿ 
ಸರ್ಕಾರಿ ನೌಕರರ ಮುಷ್ಕರದ ನಡುವೆಯೂ ಜಿಲ್ಲಾಕಾರಿ ಡಾ.ಆರ್.ಸೆಲ್ವಮಣಿ ಎಂದಿನಂತೆಯೇ ಕಾರ್ಯ ನಿರ್ವಹಿಸಿದರು. ಆದರೆ ಅವರ ಸಹಾಯಕ ಸಿಬ್ಬಂದಿ ಮಾತ್ರ ಯಾರೂ ಹಾಜರಿರಲಿಲ್ಲ !
ಪ್ರತಿನಿತ್ಯದಂತೆ ಬೆಳಿಗ್ಗೆ 10 ಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿದರು. ಕಚೇರಿಗೆ ಆಗಮಿಸಿದ  ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.
ಬಳಿಕ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡರು.
ಈ ಕುರಿತು ಹೊಸದಿಗಂತ ಜೊತೆ ಮಾತನಾಡಿದ ಡಾ.ಆರ್.ಸೆಲ್ವಮಣಿ, ಕಚೇರಿ ಸಿಬ್ಬಂದಿ ಆಗಮಿಸಿಲ್ಲ. ಸ್ವಲ್ಪ ಒತ್ತಡ ಕಡಿಮೆ ಇದೆ. ಹಾಗಾಗಿ ಬಾಕಿ ಇರುವ ಎಲ್ಲಾ ಕಡತಗಳ ವಿಲೇವಾರಿಯಲ್ಲಿ ತೊಡಗಿದ್ದೇನೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!