Thursday, September 21, 2023

Latest Posts

ಮಾರ್ಕೆಟಾ ವೊಂಡ್ರೊಸೊವಾ ಮುಡಿಗೆ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಕಿರೀಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಫೈನಲ್​ನಲ್ಲಿ ಟುನೀಶಿಯಾದ ಓನ್ಸ್ ಜಬೇರ್ ವಿರುದ್ಧ ಜೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೊವಾ ಜಯಗಳಿಸಿದ್ದಾರೆ.

ಫೈನಲ್ ಕಾದಾಟದಲ್ಲಿ ಓನ್ಸ್ ಜಬೇರ್ ಅವರನ್ನು 6-4, 6-4 ಅಂತರದಿಂದ ಸೋಲಿಸಿ ಮಾರ್ಕೆಟಾ ವಿಂಬಲ್ಡನ್ ಕಿರೀಟವನ್ನು ತಮ್ಮದಾಗಿಸಿಕೊಂಡರು.

2022 ರ ವಿಂಬಲ್ಡನ್ ಫೈನಲ್​ನಲ್ಲೂ ಸೋತು ರನ್ನರ್ ಅಪ್ ಆಗಿದ್ದ ಒನ್ಸ್ ಜಬೇರ್ ಈ ಬಾರಿಯೂ ಗೆಲುವು ಸಾಧಿಸಲು ವಿಫಲರಾದರು.

ಇತ್ತ ನಿರಂತರ ಉತ್ತಮ ಆಟ ಮಾರ್ಕೆಟಾ 6-4 ಅಂತರದಿಂದ ಗೆದ್ದುಕೊಂಡರು.ಈ ಮೂಲಕ ಜಾನಾ ನೊವೊಟ್ನಾ ಮತ್ತು ಪೆಟ್ರಾ ಕ್ವಿಟೋವಾ ನಂತರ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆದ್ದ ಮೂರನೇ ಜೆಕ್ ಗಣರಾಜ್ಯದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!