Friday, March 24, 2023

Latest Posts

ಬಾಲಿವುಡ್ ಅಂಗಳದಲ್ಲಿ ಮದುವೆ ಗೌಜಿ: ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾದ ಮತ್ತೊಂದು ಜೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬಾಲಿವುಡ್ ಅಂಗಳದಲ್ಲಿ ಈಗ ಮದುವೆ ಗೌಜಿ . ಕೆಲವು ದಿನಗಳ ಹಿಂದೆಯಷ್ಟೇ ನಟಿ ಕಿಯಾರಾ-ಸಿದ್ (Kiara-Siddarth) ಮದುವೆ ನಡೆದಿದ್ದು, ಇದೀಗ ಮತ್ತೊಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.

ನಟಿ‌ ರಾಕುಲ್‌ ಸಿಂಗ್‌ ಪ್ರೀತ್ ಬಹುಕಾಲದ ಗೆಳೆಯನ ಜೊತೆ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ.

ಅಥಿಯಾ ಶೆಟ್ಟಿ (Athiya Shetty) ಜೋಡಿ ನಂತರ ಸಿದ್-ಕಿಯಾರಾ ಮದುವೆಯಾಗುವ ಮೂಲಕ ಸಿಹಿ ಸುದ್ದಿ ನೀಡಿದ್ದರು. ಈಗ ಅದೇ ಹಾದಿಯಲ್ಲಿ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಕೂಡ ಇದ್ದಾರೆ.

ಬಾಲಿವುಡ್‌ನ (Bollywood) ಯುವ ನಿರ್ಮಾಪಕ ಜಾಕಿ ಭಗ್ನಾನಿ(Jackky Bhagnani)- ರಾಕುಲ್ ಹಲವು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ. ಇತ್ತೀಚಿಗೆ ಗೆಳೆಯ ಜಾಕಿ ಬರ್ತಡೇ ಕೂಡ ರಾಕುಲ್ ಅದ್ದೂರಿಯಾಗಿ ಮುಂಬೈ ರೆಸಾರ್ಟ್‌ವೊಂದರಲ್ಲಿ ಆಚರಿಸಿದ್ದರು.

ಇದೀಗ ಭಗ್ನಾನಿ-ರಾಕುಲ್ ಮದುವೆಯ (Wedding) ಸುದ್ದಿ ಮುಂಚೂಣಿಯಲ್ಲಿದೆ. ಮದುವೆಗೆ ತೆರೆಮರೆಯಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!