ರಾಹುಲ್‌ ಗಾಂಧಿಗೆ ಏರ್‌ಪೋರ್ಟ್‌ನಲ್ಲಿ ಇಳಿಯಲು ನಿರಾಕರಣೆ: ಕಾಂಗ್ರೆಸ್ ಕತೆಗೆ ತಿರುಗೇಟು ಕೊಟ್ಟ ಅಧಿಕಾರಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕಮಲಾ ನೆಹರು ಸ್ಮಾರಕ ಆಸ್ಪತ್ರೆಯ ಕಾರ್ಯಕ್ರಮಕ್ಕಾಗಿ ವಾರಣಾಸಿಗೆ ಹೊರಟಿದ್ದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಗೆ ಏರ್‌ಪೋರ್ಟ್‌ನಲ್ಲಿ ಇಳಿಯಲು ವಿಮಾನ ನಿಲ್ದಾಣದ ಅಧಿಕಾರಿಗಳು ಅನುಮತಿಯನ್ನು ನೀಡಿರಲಿಲ್ಲ ಎಂದು ಕಾಂಗ್ರೆಸ್‌ ಆರೋಪ ಮಾಡಿತ್ತು.

ಇದೀಗ ಕಾಂಗ್ರೆಸ್‌ಗೆ ವಾರಣಾಸಿ ಏರ್‌ಪೋರ್ಟ್‌ನ ಅಧಿಕಾರಿಗಳು ಸಾಕ್ಷಿ ಸಮೇತ ತಿರುಗೇಟು ನೀಡಿದ್ದಾರೆ.

ಈ ಕುರಿತು ಸ್ಪಷ್ಟೀಕರಣ ನೀಡಿರುವ ವಾರಣಾಸಿ ಏರ್‌ಪೋರ್ಟ್‌ ಅಧಿಕಾರಿಗಳು, ಅವರು ಬರಬೇಕಿದ್ದ ವಿಮಾನ ಅದಾಗಲೇ ಕ್ಯಾನ್ಸಲ್‌ ಆಗಿತ್ತು ಎಂದು ಹೇಳಿದೆ.

ನಿಗದಿಯಂತೆ ಸೋಮವಾರ ರಾತ್ರಿ ರಾಹುಲ್‌ ಗಾಂಧಿ ಪ್ರಯಾಗ್‌ ರಾಜ್‌ನಲ್ಲಿನ ಕಾರ್ಯಕ್ರಮಕ್ಕಾಗಿ ವಾರಣಾಸಿ ಏರ್‌ಪೋರ್ಟ್‌ಗೆ ಬರಬೇಕಿತ್ತು. ಆದರೆ, ರಾಹುಲ್‌ ಗಾಂಧಿ ಅವರಿದ್ದ ವಿಮಾನಕ್ಕೆ ಏರ್‌ಪೋರ್ಟ್‌ನಲ್ಲಿ ಇಳಿಯಲು ಅನುಮತಿ ನಿರಾಕರಿಸಲಾಗಿತ್ತು ಎಂದು ಕಾಂಗ್ರೆಸ್‌ ಆರೋಪ ಮಾಡಿತ್ತಲ್ಲದೆ, ರಾಹುಲ್‌ ಅವರ ಜನಪ್ರಿಯತೆಯನ್ನು ಸಹಿಸದೇ ಬಿಜೆಪಿ ಈ ರೀತಿ ಮಾಡುತ್ತಿದೆ ಎಂದು ಆರೋಪ ಮಾಡಿತ್ತು.

ತಾವು ಮತ್ತು ಪಕ್ಷದ ಇತರ ನಾಯಕರು ರಾಹುಲ್‌ ಗಾಂಧಿಯನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣದಲ್ಲಿದ್ದರು ಆದರೆ ಕೊನೆಯ ಗಳಿಗೆಯಲ್ಲಿ ಅವರ ವಿಮಾನಕ್ಕೆ ಇಳಿಯಲು ಅನುಮತಿ ಸಿಗಲಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಜಯ್ ರೈ ಹೇಳಿದರು. ಇದರಿಂದಾಗಿ ರಾಹುಲ್‌ ಗಾಂಧಿ ರಾಜಧಾನಿಗೆ ವಾಪಸಾಗಿದ್ದರು.

ವಾರಣಾಸಿ ಏರ್‌ಪೋರ್ಟ್‌ನ ನಿರ್ದೇಶಕ ಆರ್ಯಮಾ ಸನ್ಯಾಲ್‌ ಪ್ರತಿಕ್ರಿಯೆ ನೀಡಿದ್ದು, ರಾಹುಲ್‌ ಗಾಂಧಿ ಬರುತ್ತಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ ಎಂದಿದ್ದಾರೆ. ಏರ್‌ಪೋರ್ಟ್‌ ಅಧಿಕಾರಿಗಳು ರಾಹುಲ್‌ ಗಾಂಧಿ ವಿಮಾನಕ್ಕೆ ಇಳಿಯುವ ಅನುಮತಿ ನಿರಾಕರಿಸಿದರು ಎನ್ನುವ ಆರೋಪವನ್ನು ಅವರು ಸ್ಪಷ್ಟವಾಗಿ ತಿರಸ್ಕರಿಸಿದರು. ವಾರಣಾಸಿ ವಿಮಾನನಿಲ್ದಾಣಕ್ಕೆ ಇಳಿಯಲು ಬರುತ್ತಿರುವ ವಿಮಾನ ಅದಾಗಲೇ ರದ್ದಾಗಿತ್ತು ಎನ್ನುವ ಮಾಹಿತಿ ಏರ್‌ ಟ್ರಾಫಿಕ್‌ ಕಂಟ್ರೋಲರ್‌ಗೆ ನೀಡಲಾಗಿತ್ತು ಎಂದು ಸನ್ಯಾಲ್‌ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರ (BJP Governament) ರಾಹುಲ್‌ ಗಾಂಧಿಯವರಿಗೆ (Rahul Gandhi) ಹೆದರುತ್ತಿದೆ ಆ ಕಾರಣಕ್ಕಾಗಿ ಅವರ ವಿಮಾನಕ್ಕೆ ವಾರಣಾಸಿಯಲ್ಲಿ (Varanasi) ಇಳಿಯಲು ಅನುಮತಿ ನೀಡಲಾಗಿಲ್ಲ. ಭಾರತ್‌ ಜೋಡೋ ಯಾತ್ರೆಯ (bharat jodo yatra) ಬಳಿಕ ರಾಹುಲ್‌ ಗಾಂಧಿಯವರ ಜನಪ್ರಿಯತೆ ಬಹಳ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ (Prime Miniser Narendra Modi ) ಅವರಿಗೆ ಇದು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ರಾಹುಲ್‌ ಗಾಂಧಿಗೆ ಸಮಸ್ಯೆ ನೀಡುತ್ತಿದ್ದಾರೆ ಎಂದು ಅಜಯ್‌ ರೈ ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!