ಮದುವೆಯೂ ಕಷ್ಟ ವಿಚ್ಛೇದನವೂ ಕಷ್ಟ: ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮಾತಿನ ಅರ್ಥವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಕ್ರಿಕೆಟರ್ ಶೋಯೇಬ್ ಮಲಿಕ್ ವಿಚ್ಛೇದನ ಪಡೆದಿದ್ದಾರೆ ಎಂಬ ಗಾಳಿ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಗಾಸಿಪ್‌ಗಳ ನಡುವೆಯೇ ಕಳೆದ ವರ್ಷ ಜೊತೆಯಾಗಿಯೇ ಇಬ್ಬರೂ ದುಬೈನಲ್ಲಿ ತಮ್ಮ ಪ್ರೀತಿಯ ಮಗನ ಹುಟ್ಟುಹಬ್ಬ ಆಚರಿಸಿ ನಾವು ಜೊತೆಯಾಗಿದ್ದೇವೆ ಎಂಬ ಸಂದೇಶ ನೀಡಿದ್ದರು.

ಇದರ ಮಧ್ಯೆ ಈಗ ಸಾನಿಯಾ ಮಿರ್ಜಾ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬದುಕಿನಲ್ಲಿರುವ ಕಷ್ಟಗಳ ಬಗ್ಗೆ ಪೋಸ್ಟ್ ಮಾಡಿದ್ದು, ಇದರಿಂದ ಮತ್ತೆ ಅವರ ವಿವಾಹ ವಿಚ್ಛೇದನ ಸುದ್ದಿ ಮುನ್ನೆಲೆಗೆ ಬಂದಿದೆ.

‘ಮದುವೆಯೂ ಕಷ್ಟ ವಿಚ್ಛೇದನವೂ ಕಷ್ಟ, ನಿಮ್ಮ ಕಷ್ಟ ಏನು ಎಂಬುದನ್ನು ಆಯ್ಕೆ ಮಾಡಿ, ಬೊಜ್ಜುತನವೂ ಕಷ್ಟ, ಫಿಟ್ ಆಗಿ ಇರೋದು ಕಷ್ಟ, ನಿಮ್ಮ ಕಷ್ಟ ಏನು ಎಂಬುದನ್ನು ಆಯ್ಕೆ ಮಾಡಿ, ಸಾಲ ಹೊಂದಿರುವುದು ಕೂಡ ಕಷ್ಟ ಅರ್ಥಿಕವಾಗಿ ಸುಸ್ಥಿರವಾಗಿರುವುದು ಕೂಡ ಕಷ್ಟ, ನಿಮ್ಮ ಕಷ್ಟ ಏನು ಎಂಬುದನ್ನು ಆಯ್ಕೆ ಮಾಡಿ, ಮಾತನಾಡಿದರೂ ಕಷ್ಟ ಮಾತನಾಡದೇ ಇದ್ದರೂ ಕಷ್ಟ, ನಿಮ್ಮ ಕಷ್ಟ ಏನು ಎಂಬುದನ್ನು ಆಯ್ಕೆ ಮಾಡಿ, ಜೀವನ ಎಂದಿಗೂ ಸುಲಭವಾಗಿರುವುದಿಲ್ಲ, ಅದು ಯಾವಾಗಲೂ ಕಷ್ಟಕರವಾಗಿರುತ್ತದೆ. ಆದರೆ ನಾವು ಬುದ್ಧಿವಂತಿಕೆಯಿಂದ ನಮ್ಮ ಕಷ್ಟ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬಂತಹ ಟಿಪ್ಪಣಿಯನ್ನು ಪೋಸ್ಟ್ ಮಾಡಿದ್ದಾರೆ.

ದು ಅವರ ಅಭಿಮಾನಿಗಳು ಹಾಗೂ ನೆಟ್ಟಿಗರಲ್ಲಿ ಮತ್ತೆ ವಿಚ್ಛೇದನದ ಊಹಾಪೋಹಾ ಸೃಷ್ಟಿಸುವುದಕ್ಕೆ ಕಾರಣವಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!