September 20, 2026
Sunday, September 20, 2026
spot_img

ಇಲ್ಲೇ ಕಸ ಹಾಕಿ ಬರ್ತೀನಿ ಎಂದು ಹೇಳಿ ಬಾಯ್‌ಫ್ರೆಂಡ್‌ ಜೊತೆ ಓಡಿ ಹೋದ ವಿವಾಹಿತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಊಟಕ್ಕೆ ನಿದ್ದೆ ಮಾತ್ರೆ ಹಾಕಿ ಗಂಡ ಇನ್ನೇನು ಮಲಗಬೇಕು ಎನ್ನುವಾಗ ಇಲ್ಲೇ ಕಸ ಹಾಕಿ ಹೋಗಿ ಬರ್ತೀನಿ ಎಂದು ಹೇಳಿದ ಪತ್ನಿಯೊಬ್ಬರು ತನ್ನ ಬಾಯ್‌ಫ್ರೆಂಡ್‌ ಜೊತೆ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲಿ ನಡೆದಿದೆ.

ನಾಪತ್ತೆಯಾದ ಪ್ರಿಯಾಂಕಾಗೆ ಇಬ್ಬರು ಮುದ್ದಾದ ಗಂಡುಮಕ್ಕಳಿದ್ದಾರೆ. ಆದರೂ ಮಕ್ಕಳನ್ನು ಲೆಕ್ಕಿಸದೇ, ಪತಿ ಶರತ್‌ಕುಮಾರ್‌ರನ್ನು ತೊರೆದು ಆಕೆ ಬಾಯ್‌ಫ್ರೆಂಡ್‌ ಜೊತೆ ಹೋಗಿದ್ದಾರೆ. ನಾನು ಮನೆಯಲ್ಲೇ ಇದ್ದೆ. ಅವಳು ಊಟಕ್ಕೆ ಏನು ಹಾಕಿದ್ಲೋ ಗೊತ್ತಿಲ್ಲ. ಊಟ ಆಗುತ್ತಿದ್ದಂತೆಯೇ ತಡೆಯಲಾರದ ನಿದ್ದೆ ಬರುತ್ತಿತ್ತು. ಈ ವೇಳೆ ಕಸ ಹಾಕಿ ಬರ್ತೀನಿ ಎಂದಳು. ನಾನು ಸರಿ ಎಂದು ಹೇಳಿದೆ. ಆದರೆ ಅವಳು ಕಟಿಂಗ್‌ ಶಾಪ್‌ ಪ್ರಭು ಜೊತೆ ಓಡಿಹೋಗಿದ್ದಾಳೆ ಎಂದು ಪತಿ ಶರತ್‌ ದೂರು ನೀಡಿದ್ದಾರೆ.

ನಾನು ಕೆಲಸಕ್ಕೆ ಹೋದಾಗ ಮನೆಯಲ್ಲೇ ಇರ್ತಿದ್ದ ಪ್ರಿಯಾಂಕ ನಮ್ಮ ಏರಿಯಾದಲ್ಲಿರೋ ಕಟಿಂಗ್‌ ಶಾಪ್‌ಗೆ ಹೋಗುತ್ತಿದ್ದಳು. ಅಲ್ಲಿದ್ದ ಪ್ರಭುವನ್ನು ಮೀಟ್‌ ಮಾಡುತ್ತಿದ್ದಳು. ಅವಳ ಫೋನ್‌ಗೆ ಪ್ರಭು ಕರೆನ್ಸಿ ಹಾಕುತ್ತಿದ್ದ. ಈ ವಿಷಯವಾಗಿ ಜಗಳ ಆಡಿದ್ದೆವು. ಅವಳು ಕಸದ ಬುಟ್ಟಿ ಹಾಕಲು ಹೋಗುವ ಮುನ್ನವೇ ತನ್ನ ಬಟ್ಟೆಗಳನ್ನು ಪ್ಯಾಕ್‌ ಮಾಡಿದ್ದಳು. ದೊಡ್ಡ ಕಸದ ಬುಟ್ಟಿಯಿಂದ ತನ್ನ ಬ್ಯಾಗ್‌ನ್ನು ಬಚ್ಚಿಟ್ಟುಕೊಂಡು ಹೋಗಿದ್ದಾಳೆ. ಅವಳನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ.

ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಿಯಾಂಕಾಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸಿಸಿ ಕ್ಯಾಮರಾಗಳಲ್ಲಿ ಪ್ರಿಯಾಂಕಾ ಬ್ಯಾಗ್‌ ಹಿಡಿದು ಹೋಗುತ್ತಿರುವ ದೃಶ್ಯ ಕಾಣಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !