ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನಾಯಿಗಳಿಗೆ ಮಾಸ್ಕ್ ಕಡ್ಡಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಎಲ್ಲ ನಾಯಿಗಳಿಗೂ ಮಾಸ್ಕ್ ಕಡ್ಡಾಯವಾಗಿದೆ.
ಮಾನವರ ಮೇಲೆ ನಾಯಿ ದಾಳಿ ಹೆಚ್ಚಾಗಿದ್ದು, ಗಾಜಿಯಾಬಾದ್‌ನ ಮುನಿಸಿಪಲ್ ಕಾರ್ಪೋರೇಷನ್ ಮಾಸ್ಕ್ ಕಡ್ಡಾಯ ಎಂದು ನೂತನ ನಿಯಮಾವಳಿ ರೂಪಿಸಿದೆ. ಕಂಡಕಂಡವರಿಗೆ ನಾಯಿ ಕಚ್ಚುವುದು ಹೆಚ್ಚಾಗುತ್ತಿದ್ದು, ಆಡಳಿತವು ನಾಯಿ ಸಾಕುವುದಕ್ಕೆ ಹೊಸದಾಗಿ ನಿಯಮಾವಳಿಗಳನ್ನು ರೂಪಿಸಿದೆ.
ಹೋರಾಟ ಮನೋಭಾವ ಇರುವ ಪಿಟ್‌ಬುಲ್, ರೋಟ್‌ವೀಲರ್ ಮತ್ತು ಡೊಗೊ ಅರ್ಜಂಟಿನೋ ತಳಿಗಳನ್ನು ಮುದ್ದಿನ ನಾಯಿಯಂತೆ ಮನೆಯಲ್ಲಿ ಸಾಕುವುದಕ್ಕೆ ನಿಷೇಧ ಹೇರಲಾಗಿದೆ.

ಯಾವ್ಯಾವ ನಿಯಮಗಳು?

  • ಯಾವುದೇ ಕುಟುಂಬ ಒಂದಕ್ಕಿಂತ ಹೆಚ್ಚು ನಾಯಿ ಸಾಕುವಂತಿಲ್ಲ
  • ನಾಯಿ ಸಾಕಲು ಲೈಸೆನ್ಸ್ ಕಡ್ಡಾಯ
  • ಎತ್ತರ ಕಟ್ಟಡದಲ್ಲಿ ವಾಸಿಸುವ ಜನ ನಾಯಿಗಳನ್ನು ಸಾಕುತ್ತಿದ್ದಲ್ಲಿ ಮನೆಯಿಂದ ಹೊರಗೆ ಕರೆದುಕೊಂಡುಬರಲು ಕಡ್ಡಾಯವಾಗಿ ಲಿಫ್ಟ್ ಬಳಸಬೇಕು
  • ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿಸುವಾಗ ಮಾಸ್ಕ್ ಧರಿಸಬೇಕು

ನಾಯಿಗಳನ್ನು ಸಾಕಿದವರಿಗೆ ಅದು ಮುದ್ದಿನ ಪ್ರಾಣಿ, ಆದರೆ ಕಚ್ಚಿಸಿಕೊಂಡವರಿಗೆ ಅದರ ನೋವು ಗೊತ್ತು. ನಾಯಿಯಿಂದ ತಪ್ಪಿಸಿಕೊಳ್ಳಲಾರದ ಮಕ್ಕಳು ಹೆಚ್ಚು ನೋವು ಅನುಭವಿಸುತ್ತಾರೆ. ಪಿಟ್‌ಬುಲ್ ನಾಯಿ ಕಡಿತದಿಂದ ಮಗುವಿನ ಮುಖಕ್ಕೆ 150 ಹೊಲಿಗೆ ಹಾಕಲಾಗಿದೆ ಎಂದು ಗಾಜಿಯಾಬಾದ್ ಮೇಯರ್ ಆಸಾ ಶರ್ಮಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!