ಮಾಸ್ಕ್, ಕೋವಿಡ್ ಪಾಸ್ ಏನೂ ಬೇಡ, ಎಲ್ಲಾ ಕೋವಿಡ್ ನಿಯಮಗಳನ್ನು ಸಡಿಲಿಸಿದ ಇಂಗ್ಲೆಂಡ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್‌ನಲ್ಲಿ ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಹಾಕುವ ಮತ್ತು ಕೋವಿಡ್ ಪಾಸ್ ತೋರಿಸುವ ಅವಶ್ಯ ಇಲ್ಲ.

ಹೌದು, ಮುಂದಿನ ಗುರುವಾರದಿಂದ ಕೋವಿಡ್‌ನ ಎಲ್ಲಾ ನಿಯಮಗಳನ್ನು ಕೈಬಿಡಲಾಗುವುದು ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಘೋಷಿಸಿದ್ದಾರೆ. ಜತೆಗೆ ಜನರು ಮನೆಯಿಂದ ಕೆಲಸ ಮಾಡುವಂತೆ ಸರ್ಕಾರ ನೀಡಿರುವ ಸಲಹೆಯನ್ನು ತಕ್ಷಣವೇ ಕೈ ಬಿಡುತ್ತೇವೆ ಎಂದೂ ಹೇಳಿದ್ದಾರೆ.

ಕಡ್ಡಾಯವಾಗಿ ಮಾಸ್ಕ್ ಹಾಕುವುದು, ಮನೆಯಿಂದಲೇ ಕೆಲಸ ಹಾಗೂ ಕೋವಿಡ್ ಪಾಸ್ ತೋರಿಸುವುದು ಇದೆಲ್ಲಾ ‘ಪ್ಲಾನ್ ಬಿ’ ಆಗಿತ್ತು. ಇದೀಗ ‘ಪ್ಲಾನ್ ಎ’ಗೆ ಹಿಂದಿರುಗಲಾಗುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಈ ಬಗ್ಗೆ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಕೂಡ ಮಾತನಾಡಿದ್ದು, ಇದು ನಾವೆಲ್ಲರೂ ಹೆಮ್ಮೆಪಡುವ ಕ್ಷಣವಾಗಿದೆ. ಒಗ್ಗಟ್ಟಿನಲ್ಲಿ ಸಾಗಿದರೆ ದೇಶ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇದು ಉದಾಹರಣೆ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!