ತಾಲಿಬಾನಿಗಳಿಗೂ ನಡುಕ: ಆಫ್ಘನ್‌ನಲ್ಲಿ ಭೀಕರ ಗುಂಡಿನ ದಾಳಿಗೆ ಆರು ತಾಲಿಬಾನಿಗಳ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನದ ಕುನಾರ್ ಪ್ರಾಂತ್ಯದಲ್ಲಿ ಭೀಕರ ಗುಂಡಿನ ದಾಳಿ ನಡೆದಿದ್ದು, ತಾಲಿಬಾನ್ ಕಮಾಂಡರ್, ಆತನ ಮಗ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ ಗುಪ್ತಚರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದ ನಂತರ ತಾಲಿಬಾನ್ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಇಷ್ಟು ದಿನ ಜನರು ತಾಲಿಬಾನಿಗಳಿಗೆ ಹೆದರುತ್ತಿದ್ದರೆ, ಇದೀಗ ತಾಲಿಬಾನಿಗಳಿಗೂ ಜೀವಭಯ ಕಾಡುತ್ತಿದೆ.

ಪೂರ್ವ ಕುನಾರ್ ಪ್ರಾಂತ್ಯದಲ್ಲಿ ಗುಂಡಿನ ದಾಳಿ ನಡೆದಿದೆ. ಇದು ವೈಯಕ್ತಿಕ ದ್ವೇಷದಿಂದ ನಡೆದ ಹತ್ಯೆ ಎನ್ನಲಾಗಿದೆ. ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರದಿಂದ ಈ ರೀತಿ ಘಟನೆಗಳು ನಡೆಯುತ್ತಲೇ ಇವೆ. ನಾಗರಿಕರ ಮೇಲೆ ತಾಲಿಬಾನಿಗಳು ಹಿಂಸಾತ್ಮಕ ಕೃತ್ಯಗಳನ್ನು ಹೆಚ್ಚಾಗಿ ನಡೆಸುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!