BIG UPDATE | ಇಲ್ಲಿ ಖಾಸಗಿ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದಲ್ಲಿ ಕೊರೋನಾ ಮಿತಿಮೀರಿದ್ದು, ರಾಜ್ಯದಲ್ಲಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿಯೂ ಇನ್ನು ಮಾಸ್ಕ್ ಕಡ್ಡಾಯವಾಗಿದೆ. ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಶಾಲೆಗಳಿಗೆ ಖಾಸಗಿ ಶಾಲಾ ಒಕ್ಕೂಟ ಸೂಚನೆ ನೀಡಿದ್ದು, ದಿನವೂ ಮಾಸ್ಕ್ ಧರಿಸಬೇಕಿದೆ. ಇದರ ಜತೆಗೆ ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದೆ.

ನೆಗಡಿ, ಕೆಮ್ಮು, ಶೀತ, ಜ್ವರ ಇರುವ ಯಾರೂ ಶಾಲೆಗೆ ಬರಬಾರದು, ಪರೀಕ್ಷೆ ಮಾಡಿಸಬೇಕು ಎಂದು ಸೂಚಿಸಲಾಗಿದೆ. ಕೊರೋನಾ ಹೆಚ್ಚಳವಾದರೆ, ಮತ್ತೆ ಲಾಕ್‌ಡೌನ್ ಮತ್ತೆ ಆನ್‌ಲೈನ್ ತರಗತಿ ಆರಂಭಿಸಬೇಕಾಗುತ್ತದೆ. ಇದೀಗ ನಡೆಯುತ್ತಿರುವ ತರಗತಿಗಳಿಂದ ಮಕ್ಕಳ ಕಲಿಕೆ ಹೆಚ್ಚಾಗಿದೆ. ಹಾಗಾಗಿ ಕೊರೋನಾ ಬಾರದಂತೆ ತಡೆಗಟ್ಟಬೇಕಿದೆ ಎಂದು ಶಾಲಾ ಮುಖ್ಯಸ್ಥರು ಪೋಷಕರಿಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!