ಮರಿಯಾಪೊಲ್‌ನಲ್ಲಿ ಸಾಮೂಹಿಕ ಸಮಾಧಿ ಪತ್ತೆ: 9000 ನಾಗರಿಕರನ್ನು ಕೊಂದು ಹೂತುಹಾಕಿತೇ ರಷ್ಯಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಯೂಕ್ರೇನ್​ನ ಮರಿಯುಪೋಲ್​ನಲ್ಲಿ 200ಕ್ಕೂ ಹೆಚ್ಚಿನ ಸಾಮೂಹಿಕ ಸಮಾಧಿಗಳ ಉಪಗ್ರಹ ಚಿತ್ರವನ್ನು ಮ್ಯಾಕ್ಸರ್ ಟೆಕ್ನಾಲಜೀಸ್ ಸಂಸ್ಥೆಯು ಬಿಡುಗಡೆ ಮಾಡಿದ್ದು, ರಷ್ಯನ್‌ ಸೈನಿಕರು 9000 ಕ್ಕೂ ಹೆಚ್ಚಿನ ನಾಗರಿಕರನ್ನು ಕೊಂದು ಈ ಸಾಮೂಹಿಕ ಸಮಾಧಿಗಳಲ್ಲಿ ಹೂತು ಹಾಕಿದ್ದಾರೆ ಎಂದು ಉಕ್ರೇನ್‌ ಅಧಿಕಾರಿಗಳು ಆರೋಪಿಸಿದ್ದಾರೆ.
ತನ್ನ ವಶದಲ್ಲಿರುವ ಮರಿಯುಪೋಲ್​ನ ಪಶ್ಚಿಮಕ್ಕೆ ರಷ್ಯಾ ಸೇನೆ ದೊಡ್ಡ ಕಂದಕವನ್ನು ನಿರ್ವಿುಸಿದೆ. ತನ್ನ ಯುದ್ಧಾಪರಾಧದ ಕೃತ್ಯವನ್ನು ಮರೆಮಾಚಲು ಅದು ಬಳಸುತ್ತಿದೆ. ನಾಗರಿಕರ ಹತ್ಯೆ ಮಾಡಿ ಅವುಗಳನ್ನು ಅಲ್ಲಿ ಸಮಾಧಿ ಮಾಡುತ್ತಿದೆ ಎಂದು ಉಕ್ರೇನ್‌ ಅಧಿಕಾರಿಗಳು ಆರೋಪಿಸಿದ್ದಾರೆ. ಮನ್​ಹುಷ್​ ನಗರದ ಉಪಗ್ರಹ ಚಿತ್ರಗಳಲ್ಲೂ ಸಾಮೂಹಿಕ ಸಮಾಧಿಯ ಚಿತ್ರಗಳು ಸ್ಪಷ್ಟವಾಗಿ ಗೋಚರಿಸಿದೆ.
ಮಾರ್ಚ್ 1 ರಂದು ರಷ್ಯಾದ ಪಡೆಗಳ ವಶವಾದ ಮಾರಿಯುಪೋಲ್‌ನಲ್ಲಿ ಅಂದಾಜು ಒಂದು ಲಕ್ಷ ಜನರು ಸಿಕ್ಕಿಬಿದ್ದಿದ್ದಾರೆ. ಈ ನರದ ಮೇಲೆ ರಷ್ಯನ್ನರ ದಾಳಿ ವೇಳೆ 20,000 ಕ್ಕೂ ಹೆಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ಹೇಳುತ್ತಾರೆ. ನಗರದಲ್ಲಿ ಕೊಂದುಹಾಕುತ್ತಿರುವ ನಾಗರಿಕರನ್ನು ರಷ್ಯಾದ ಟ್ರಕ್‌ಗಳು ಮನ್‌ಹುಷ್‌ ತಂದು ಸುರಿಯುತ್ತವೆ. ಇದು ಅವರ ಯುದ್ಧ ಅಪರಾಧಗಳಿಗೆ ನೇರ ಸಾಕ್ಷಿಯಾಗಿದೆ. ಮತ್ತು ಅವುಗಳನ್ನು ಮುಚ್ಚಿಡಲು ಸಾಮೂಹಿಕ ಸಮಾಧಿ ಗಳನ್ನು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನಗರದ ಬೀದಿಗಳಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸಾಯುತ್ತಿದ್ದಾರೆ ಎಂದು ಮಾರಿಯುಪೋಲ್ ಮೇಯರ್ ವಾಡಿಮ್ ಬೊಯಿಚೆಂಕೊ ವಿಷಾದ ತೋಡಿಕೊಂಡಿದ್ದಾರೆ. ರಷ್ಯನ್‌ ಸೈನಿಕರು ಸ್ಮಶಾನದ ಬಳಿ 30 ಮೀಟರ್ ಉದ್ದದ (98 ಅಡಿ ಉದ್ದ) ಹಳ್ಳಗಳನ್ನು ನಿರ್ಮಿಸಿದ್ದಾರೆ. ಯುದ್ಧದಲ್ಲಿ ಸತ್ತವರ ದೇಹಗಳನ್ನುಈ ಹಳ್ಳಗಳಲ್ಲಿ ಎಸೆದು ಮುಚ್ಚುತ್ತಾರೆ ಎಂದು ಬೊಯಿಚೆಂಕೊ ಹೇಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!