ಸಮೂಹ ಸನ್ನಿಗೆ ತುತ್ತಾದ ವಿದ್ಯಾರ್ಥಿನಿಯರು: ನೆಲದಲ್ಲಿ ಬಿದ್ದು ಹೊರಳಾಡುತ್ತಿರುವ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರಾಖಂಡ್‌ನ ಬಾಗೇಶ್ವರ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಕೆಲ ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ಕಿರುಚಿ ಕೂಗಾಡಿದ್ದಾರೆ. ಘಟನೆಯಿಂದ ವಿದ್ಯಾರ್ಥಿಗಳ ಪೋಷಕರು, ಶಿಕ್ಷಕರು ಬೆಚ್ಚಿಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಹಾಗೂ ವೈದ್ಯರ ತಂಡ ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳ ವರ್ತನೆಗೆ ಗಾಬರಿಯಾಗಿದ್ದಾರೆ. ವಿದ್ಯಾರ್ಥಿನಿಯರು ಕೂಗಾಡುವುದು, ಅಳುವುದು ಮತ್ತು ಅಸಹಜವಾಗಿ ವರ್ತನೆ ಶಿಕ್ಷಣ ಇಲಾಖೆಯನ್ನು ಬೆಚ್ಚಿ ಬೀಳಿಸಿದೆ.

ಇದನ್ನು ಸಾಮೂಹಿಕ ಸನ್ನಿ  (Mass Hysteria)ಎನ್ನಲಾಗಿದ್ದು, ವಿದ್ಯಾರ್ಥಿಗಳು ನೆಲದ ಮೇಲೆ ಬಿದ್ದು ಹೊರಳಾಡುವ ವಿಡಿಯೋ ಇದೀಗ ವೈರಲ್‌ ಆಗಿದೆ. ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕಿ ವಿಮಲಾ ದೇವಿ ಆತಂಕ ವ್ಯಕ್ತಪಡಿಸಿದ್ದು, ಮಂಗಳವಾರ ಕೆಲ ವಿದ್ಯಾರ್ಥಿಗಳಲ್ಲಿ ಈ ರೀತಿಯ ವರ್ತನೆ ಕಂಡುಬಂದಿತ್ತು. ಇದ್ದಕ್ಕಿದ್ದಂತೆ ಅಳುವುದು, ಕೂಗಾಡುವುದು, ತಲೆ ಬಡಿದುಕೊಳ್ಳುತ್ತಾ ಹುಚ್ಚು ಹುಚ್ಚಾಗಿ ವರ್ತಿಸಿದ್ದರು. ಸ್ಥಳೀಯ ಅರ್ಚಕರು ಬಂದು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಮರುದಿನ ಸಹ ಅದೇ ಘಟನೆ ಪುನರಾವರ್ತನೆದ್ದರಿಂದ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿರುವಿದಾಗಿ ತಿಳಿಸಿದರು.

ವಿದ್ಯಾರ್ಥಿಗಳ ಅಸಹಜ ವರ್ತನೆಯನ್ನು ಡೂನ್ ಮೆಡಿಕಲ್ ಕಾಲೇಜ್‌ನ ಫಿಸಿಯಾಟ್ರಿಸ್ಟ್ ಡಾ. ಜಯಾ ನವನಿ ಅವರು ಇದನ್ನು ‘ಸಾಮೂಹಿಕ ಹಿಸ್ಟೀರಿಯಾ’ ಎಂದು ಕರೆದಿದ್ದಾರೆ. ಅಂದರೆ ಇದು ವಿದ್ಯಾರ್ಥಿಗಳ ಸುತ್ತ ರೂಪಿಸುವ ಸಾಮಾಜಿಕ ಬೆಳವಣಿಗೆಗೆ ಸಂಬಂಧಿಸಿವೆ. ಈ ಹಿಂದೆ ಜಿಲ್ಲೆಯ ಇತರ ಕೆಲವು ಶಾಲೆಗಳಲ್ಲಿ ಇಂತಹ ಘಟನೆಗಳು ವರದಿಯಾಗಿದ್ದವು ಎಂದಿದ್ದಾರೆ.

ಸಮೂಹ ಸನ್ನಿ ಎಂದರೇನು..?

ಇದೊಂದು ಮಾನಸಿಕ ಕಾಯಿಲೆಯಾಗಿದೆ. ಇದಕ್ಕೆ ತುತ್ತಾದವರು ಇದ್ದಕ್ಕಿದ್ದಂತೆ ವಿಚಿತ್ರವಾಗಿ ವರ್ತಿಸಲು ಶುರು ಮಾಡುತ್ತಾರೆ. ಜೊತೆಗೆ ಇದೊಂದು ಅಂಟು ರೋಗ ಅಂತಲೂ ಕರೆಯುತ್ತಾರೆ. ಒಬ್ಬರು ಹೀಗೆ ವರ್ತಿಸುವಾಗ ಅವರ ನಡವಳಿಕೆ ಇತರರಿಗೂ ವ್ಯಾಪಿಸಿ ಅವರೂ ಈ ಪ್ರಭಾವಕ್ಕೆ ಒಳಗಾಗುತ್ತಾರೆ. ಮಾನಸಿಕ ಹಾಗೂ ಭಾವನಾತ್ಮಕ ಒತ್ತಡದಿಂದ ಬಂದಿರುವ ಸಮಸ್ಯೆಯಾಗಿದ್ದು, ವಿಚಿತ್ರವಾಗಿ ವರ್ತಿಸುತ್ತಾರೆ.

ಇದಕ್ಕೆ ಇಂಥದ್ದೇ ಚಿಕಿತ್ಸೆ ಅಂತ ಇಲ್ಲ. ಮಕ್ಕಳ ಸ್ಥಿತಿ ನೋಡಿ ಪೋಷಕರು ಶಾಲೆಯಲ್ಲಿ ಹೋಮ-ಹವನ ಮಾಡಿಸಿ ಎಂದು ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. ಆದರೆ ಪೋಷಕರ ಮನವಿ ನಿರಾಕರಿಸಿದ ಅಧಿಕಾರಿಗಳು ಸೂಕ್ತ ಚಿಕಿತ್ಸೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!