ಭಾರತ, ಫ್ರಾನ್ಸ್‌, ಯುಎಇ ತ್ರಿಪಕ್ಷೀಯ ಮಾತುಕತೆ: ಇಂಡೋ ಫೆಸಿಫಿಕ್‌ ಭಾಗದಲ್ಲಿ ಸಹಕಾರದ ಕುರಿತು ಚರ್ಚೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತ, ಫ್ರಾನ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳುಪರಸ್ಪರ ಮಾತುಕತೆ ನಡೆಸಿದ್ದು ಹೊಸ ತ್ರಿಪಕ್ಷೀಯ ಚೌಕಟ್ಟಿನ ಭಾಗವಾಗಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರದ ಸಂಭಾವ್ಯ ಕ್ಷೇತ್ರಗಳ ಕುರಿತು ಚರ್ಚಿಸಿವೆ.
ಕಡಲ ಭದ್ರತೆ, ಪ್ರಾದೇಶಿಕ ಸಂಪರ್ಕ, ಇಂಧನ ಮತ್ತು ಆಹಾರ ಭದ್ರತೆ ಮತ್ತು ಪೂರೈಕೆ-ಸರಪಳಿ ಸ್ಥಿತಿಸ್ಥಾಪಕತ್ವ ಮುಂತಾದ ವಿಷಯಗಳಲ್ಲಿ ಪರಸ್ಪರ ಸಹಕಾರದ ಕುರಿತು ಚರ್ಚಿಸಲಾಗಿದೆ.

“ಭಾರತ, ಫ್ರಾನ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ‘ಫೋಕಲ್ ಪಾಯಿಂಟ್‌ಗಳ’ ತ್ರಿಪಕ್ಷೀಯ ಸಭೆಯನ್ನು ಇಂದು ನಡೆಸಲಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ. ಅಲ್ಲದೇ ಮೂರೂ ದೇಶಗಳು ಭಾಗವಹಿಸಿದ್ದ ಈ ತ್ರಿಪಕ್ಷೀಯ ಮಾತುಕತೆಯಲ್ಲಿ ಇಂಡೋ-ಫೆಸಿಫಿಕ್‌ ಭಾಗದಲ್ಲಿ ಹೆಚ್ಚುತ್ತಿರುವ ಚೀನಾದ ಮಿಲಿಟರಿ ಕಾರ್ಯಗಳ ಬಗ್ಗೆಯೂ ಕಾಳಜಿ ವ್ಯಕ್ತಪಡಿಸಲಾಗಿದೆ.

“ಮೂರು ಕಡೆಯವರು ಇಂಡೋ-ಪೆಸಿಫಿಕ್ ಪ್ರದೇಶದ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಕಡಲ ಭದ್ರತೆ, ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ, ನೀಲಿ ಆರ್ಥಿಕತೆ, ಪ್ರಾದೇಶಿಕ ಸಂಪರ್ಕ, ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರ, ಇಂಧನ ಮತ್ತು ಆಹಾರ ಭದ್ರತೆ, ನಾವೀನ್ಯತೆ ಸೇರಿದಂತೆ ತ್ರಿಪಕ್ಷೀಯ ಸಹಕಾರದ ಸಂಭಾವ್ಯ ಕ್ಷೇತ್ರಗಳ ಕುರಿತು ಚರ್ಚಿಸಿದರು. ಹಾಗೂ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ತ್ರಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದರು” ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!