ನೌಕರರ ಸಾಮೂಹಿಕ ರಾಜೀನಾಮೆ: ಬಂದ್ ಆಗುತ್ತಿದೆ Twitter ಕಚೇರಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

Twitter ಗೆ ದಿನಕ್ಕೊಂದು ಸಂಕಷ್ಟ ಎಂದುರಾಗುತ್ತಿದ್ದು, ಮುಳುಗುವ ಭೀತಿ ಎದುರಿಸುತ್ತಿದೆ. ಸಂಸ್ಥೆಯ ಒಡೆತನ ಎಲೋನ್ ಮಸ್ಕ್ ವಹಿಸಿಕೊಂಡ ಬಳಿಕ ನೂರಾರು ಟ್ವಿಟ್ಟರ್​ ಉದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದಾರೆ. ಈ ಹಿನ್ನೆಲೆ ಎಲ್ಲೆಡೆ ಟ್ವಿಟ್ಟರ್ ಕಚೇರಿಗಳನ್ನು ಮುಚ್ಚಲಾಗುತ್ತಿದೆ.

ಇದರ ಜೊತೆಗೆ ಟ್ವಿಟ್ಟರ್​​ನಲ್ಲಿ #GoodByeTwitter, #RIPTwitter, #TwitterDown ಹ್ಯಾಶ್​ಟ್ಯಾಗ್​ಗಳು ಟ್ರೆಂಡಿಂಗ್​ನಲ್ಲಿದೆ.

ಉದ್ಯೋಗಿಗಳಿಗೆ ಟ್ವಿಟರ್‌ ನಲ್ಲಿ ಉಳಿಯಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಗೂಗಲ್ ಫಾರ್ಮ್‌ನಲ್ಲಿ ಹೌದು ಎಂದು ಆಯ್ಕೆ ಮಾಡಲು ಗುರುವಾರ ಮಧ್ಯಾಹ್ನ 2 ರವರೆಗೆ ಸಮಯವಿತ್ತು. ಬದಲಾಗಿ, ಉದ್ಯೋಗಿಗಳು ಸೆಲ್ಯೂಟ್ ಎಮೋಜಿಗಳ ಮೂಲಕ ವಿದಾಯ ಸಂದೇಶಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಟ್ವಿಟ್ಟರ್​ನ ಎಲ್ಲಾ ಕಚೇರಿಗಳು ತಾತ್ಕಾಲಿಕವಾಗಿ ಬಂದ್ ಅಗಿರುವುದು ತಿಳಿದುಬಂದಿದೆ.

ಇನ್ನು ಎಲ್ಲಾ ಬ್ಯಾಡ್ಜ್ ಅಕ್ಸೆಸ್ ಅನ್ನು ರದ್ದು ಮಾಡಲಾಗಿದೆ. ನವೆಂಬರ್ 21, ಸೋಮವಾರ ಕಚೇರಿಗಳು ಮತ್ತೆ ಬಾಗಿಲು ತೆರೆಯುತ್ತವೆ. ನಿಮ್ಮ ಹೊಂದಾಣಿಕೆಗೆ ನಮ್ಮ ಧನ್ಯವಾದ. ಕಂಪನಿಯ ಗೌಪ್ಯ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಾಗಲೀ, ಮಾಧ್ಯಮದಲ್ಲಾಗಲೀ ಅಥವಾ ಬೇರೆಲ್ಲಿಯಾಗಲೀ ಚರ್ಚಿಸದೆ ಕಂಪನಿಯ ನೀತಿಗೆ ಬದ್ಧತೆಯನ್ನು ಮುಂದುವವರಿಸಿರಿ ಎಂದು ಟ್ವಿಟ್ಟರ್‌ನ ಮ್ಯಾನೇಜ್ಮೆಂಟ್ ತನ್ನ ಉದ್ಯೋಗಿಗಳಿಗೆ ಮೇಲ್ ಕಳುಹಿಸಿದೆ.

ಒಂದು ತಿಂಗಳ ಹಿಂದೆ ಮಸ್ಕ್ ಕಂಪನಿಯನ್ನು ಖರೀದಿಸಿದಾಗಿನಿಂದ ಟ್ವಿಟರ್ ನಲ್ಲಿ ಅನೇಕ ಬೆಳವಣಿಗೆಗಳು ನಡೆದಿವೆ. ಟ್ವಿಟ್ಟರ್‌ನಲ್ಲಿ ದಿನಕ್ಕೆ ಕನಿಷ್ಠ 12 ಗಂಟೆ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ನಿರ್ದೇಶನ ನೀಡಿದ್ದಾರೆ. ಹಾರ್ಡ್ ಕೋರ್ ಆಗಿ ಕೆಲಸ ಮಾಡುವುದಿದ್ದರೆ ಇರಿ ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ ಎಂಬ ಎರಡು ಆಯ್ಕೆಯನ್ನು ಮಸ್ಕ್ ನೀಡಿದ್ದರು ಎನ್ನಲಾಗಿದೆ. ಈಗಾಗಲೇ ಅರ್ಧದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಇದೀಗ ಸುಮಾರು 3,000 ಉದ್ಯೋಗಿಗಳು ಟ್ವಿಟ್ಟರ್ ತೊರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here