ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ನಗರದ ಹೊರವಲಯ ಸುರತ್ಕಲ್ ಪರಿಸರದಲ್ಲಿರುವ ಎಂಆರ್‌ಪಿಎಲ್ ಘಟಕದ ಸಮೀಪ ಭಾರೀ ಪ್ರಮಾಣದ ಸ್ಫೋಟವೊಂದು ಸಂಭವಿಸಿದೆ.
ಸ್ಫೋಟದ ತೀವ್ರತೆಗೆ ಜೋಕಟ್ಟೆ ಪಂಚಾಯತ್ ಕಟ್ಟಡ ಸಹಿತ ಮನೆಗಳು ಅದುರಿವೆ. ಸಮೀಪದಲ್ಲೇ ಇರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಸ್ಫೋಟದ ತೀವ್ರತೆ ಅನುಭವವಾಗಿದೆ.
ಈ ಭಾಗದಲ್ಲಿ ಬಾಗಿಲು ಕಿಟಕಿಗಳು ಉರುಳಿದ್ದು, ಆಕಾಶದಲ್ಲಿ ದಟ್ಟ ಹೊಗೆ ಆವರಿಸಿದೆ.
ಸ್ಫೋಟದ ಶಬ್ದ ಅಂಗರಗುಂಡಿ, ಬೈಕಂಪಾಡಿ ಕೈಗಾರಿಕಾ ಪ್ರದೇಶ, ಕುಳಾಯಿವರೆಗೆ ಕೇಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ಸ್ಫೋಟಕ್ಕೆ ಕಾರಣ ಹಾಗೂ ಅನಾಹುತದ ತೀವ್ರತೆ ಇನ್ನಷ್ಟೇ ತಿಳಿದುಬರಬೇಕಿದೆ.



