Sunday, December 4, 2022

Latest Posts

ಮಾಲ್ಡೀವ್ಸ್‌ನಲ್ಲಿ ಭಾರೀ ಅಗ್ನಿ ದುರಂತ, ಒಂಬತ್ತು ಭಾರತೀಯರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಲ್ಡೀವ್ಸ್‌ನ ರಾಜಧಾನಿ ಮಾಲೆಯ ವಸತಿಗೃಹದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಒಂಬತ್ತು ಭಾರತೀಯರು ಸೇರಿ 10೦ ಮಂದಿ ಮೃತಪಟ್ಟಿದ್ದಾರೆ.

ಬೇರೆ ಬೇರೆ ದೇಶದಿಂದ ವಲಸೆ ಬಂದಿದ್ದ ಜನರು ಒಂದೇ ಕಟ್ಟಡದಲ್ಲಿ ವಾಸವಾಗಿದ್ದರು ಎನ್ನಲಾಗಿದೆ. 10 ಮಂದಿ ಮೃತಪಟ್ಟಿದ್ದು, 9 ಮಂದಿ ಭಾರತೀಯರು ಎನ್ನುವ ಮಾಹಿತಿ ತಿಳಿದಿದೆ.

ಇಕ್ಕಟ್ಟಾದ ವಸತಿಗೃಹ ಆದ ಕಾರಣ ಸಾವಿನ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ. ನೆಲಮಳಿಗೆಯಲ್ಲಿ ವಾಹನ ರಿಪೇರಿ ಗ್ಯಾರೇಜ್ ಇದ್ದು, ಅದರಿಂದ ಬೆಂಕಿ ಹೊತ್ತಿದೆ ಎನ್ನಲಾಗಿದೆ. ಅಗ್ನಿಶಾಮಕ ದಳ 10 ಶವಗಳನ್ನು ಹೊರತೆಗೆದಿದ್ದಾರೆ. ಒಬ್ಬ ಬಾಂಗ್ಲಾದೇಶದ ಪ್ರಜೆಯೂ ಮೃತಪಟ್ಟಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!