ಜ್ಞಾನವಾಪಿ ಮಸೀದಿ ಪ್ರಕರಣ: ನಾಳೆ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಸುಪ್ರಿಂ ಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಜ್ಞಾನವಾಪಿ ಸಂಕೀರ್ಣದಲ್ಲಿ ಹಿಂದೂ ದೇವತೆಗಳನ್ನು ಪೂಜಿಸಲು ಅನುಮತಿಸುವಂತೆ ಐದು ಮಹಿಳೆಯರು ಕೋರಿರುವ ಅರ್ಜಿಯ ವಿಚಾರಣೆ ನಾಳೆ(ಶುಕ್ರವಾರ) ಮಧ್ಯಾಹ್ನ ಸುಪ್ರೀಂ ಕೋರ್ಟ್‌ ನಲ್ಲಿ ವಿಚಾರಣೆಗೆ ಬರಲಿದೆ.
ವಿಚಾರಣಾ ನ್ಯಾಯಾಲಯವು ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪವಿರುವ ಸಂಕೀರ್ಣದ ವಿಡಿಯೋಗ್ರಾಫಿಕ್ ಸಮೀಕ್ಷೆಗೆ ಅನುಮತಿ ನೀಡಿದ ನಂತರ ಆ ಪ್ರದೇಶವನ್ನು ಸೀಲ್ ಮಾಡಲಾಗಿದೆ.
ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವುದನ್ನು ಮುಂದುವರಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮತ್ತು ಮಸೀದಿಗೆ ಭೇಟಿ ನೀಡುವವರು ಧಾರ್ಮಿಕ ಆಚರಣೆಗೆ ಸೂಕ್ತ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ವಾರಣಾಸಿ ತ್ವರಿತ ನ್ಯಾಯಾಲಯವು ಸಂಕೀರ್ಣದಲ್ಲಿ ಮುಸ್ಲಿಮರನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಮನವಿಯ ಬಗ್ಗೆ ನವೆಂಬರ್ 14 ಕ್ಕೆ ತೀರ್ಪನ್ನು ಮುಂದೂಡಿದೆ.
ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಒಟ್ಟು ಏಳು ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇವೆ. ಇದರಲ್ಲಿ ಐವರು ಮಹಿಳೆಯರು ಸಂಕೀರ್ಣದಲ್ಲಿ ಹಿಂದೂ ದೇವರ ಪೂಜೆಗೆ ಅವಕಾಶ ಕೋರಿರುವುದು  ಪ್ರಮುಖವಾದದ್ದಾಗಿದೆ. ಇನ್ನು ಹಿಂದೂ ಗುಂಪುಗಳು ಮಸೀದಿ ಆವರಣದಲ್ಲಿ ಸಿಕ್ಕ ರಚನೆಯು ‘ಶಿವಲಿಂಗ’ ಎಂದು ಹೇಳುತ್ತಿದ್ದು, ಮುಸ್ಲಿಂ ಪಕ್ಷಗಳು ಇದು ಹಳೆಯ ಕಾರಂಜಿಯ ಒಂದು ಭಾಗವಾಗಿದೆ ಎಂದು ವಾದಿಸುತ್ತಿವೆ. ಈ ಕುರಿತ ತೀರ್ಪು ಇನ್ನು ಹೊರಬೀಳಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!