ಕೊಲಂಬಿಯಾದಲ್ಲಿ ಭಾರೀ ಭೂಕುಸಿತ: 34 ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಲಂಬಿಯಾದಲ್ಲಿ ಭಾರೀ ಭೂಕುಸಿತ ಉಂಟಾಗಿದ್ದು, ಪ್ರಯಾಣಿಕರು ತುಂಬಿದ್ದ ಬಸ್‌ವೊಂದು ಮಣ್ಣಿನಡಿ ಸಿಲುಕಿದೆ. ಘಟನೆಯಲ್ಲಿ ಕನಿಷ್ಠ 34  ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ದೊರೆತಿದೆ. ಉತ್ತರ ಪ್ರಾಂತ್ಯದ ಚೋಕೋಗೆ ಹೋಗುವ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ್ದು, ಬಸ್ ಮಣ್ಣಿನಡಿ ಹುದುಗಿಹೋಗಿದೆ.

ಈ ಬಗ್ಗೆ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೋ ಪೆಟ್ರೋ ಈ ಹಿಂದೆ ಸಾವಿನ ಸಂಖ್ಯೆ 27 ರಷ್ಟಿತ್ತು. ಆದರೆ ಬಸ್‌ನಿಂದ ಶವಗಳನ್ನು ಹೊರತೆಗೆಯುತ್ತಿದ್ದಂತೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ 34 ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ದೊರಕಿದೆ, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದಿದ್ದಾರೆ.
ಕೊಲಂಬಿಯಾದಲ್ಲಿ ಭಾರೀ ಮಳೆಯಿಂದಾಗಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮಳೆಗೆ ಸಂಬಂಧಿಸಿದ ಅವಘಡದಲ್ಲಿ ಈವರೆಗೆ 216  ಮಂದಿ ಮೃತಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!