ಅಸ್ಸಾಂ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: 8 ಕೋಟಿ ರೂ. ಮೌಲ್ಯದ ಹೆರಾಯಿನ್ ಜಪ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಅಸ್ಸಾಂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು 8 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್​ಅನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಇಲ್ಲಿನ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಬೊಕಜಾನ್ ಪ್ರದೇಶದಲ್ಲಿ ಪೆಡ್ಲರ್‌ಗಳ ಚಟುವಟಿಕೆಯ ಬಗ್ಗೆ ಪೊಲೀಸರು ಹೊಂದಿದ್ದ ಮಾಹಿತಿ ಆಧಾರ , ಬೊಕಾಜಾನ್‌ನ ಖಟ್‌ಖಾತಿ ಎಂಬಲ್ಲಿ ವಾಹನವೊಂದನ್ನು ತಡೆದು ತಪಾಸಣೆ ನಡೆಸಿದ್ದರು. ಈ ವೇಳೆ 966 ಗ್ರಾಂ ಹೆರಾಯಿನ್​ನ ಸುಮಾರು 75 ಬಾಕ್ಸ್‌ಗಳು ಪತ್ತೆಯಾಗಿವೆ.

ಜೊತೆಗೆ ವಾಹನದಲ್ಲಿ ಸೋಲೆಮನ್ ತುಯೆರ್ ಮತ್ತು ಸಿಮಾನ್ ತುಯೆರ್ ಎಂಬುವವರಿದ್ದು, ಇವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಇವರಿಬ್ಬರೂ ದಿಮಾಪುರ್‌ನಿಂದ ಹೆರಾಯಿನ್ ಸಾಗಿಸುತ್ತಿದ್ದರು. ಗುವಾಹಟಿ ಕಡೆಗೆ ಹೋಗುವ ಯೋಜನೆ ಹಾಕಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!