ಸ್ನೇಹಿತರಿಂದ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿಸಿಕೊಂಡು ಕಣ್ಣೀರ ವಿದಾಯ ಹೇಳಿದ ಬಾಲಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಫ್ರೆಂಡ್ ಶಿಪ್ ದಿನ ಎಲ್ಲರ ಸೇಹ್ನ ಇನ್ನಷ್ಟು ಗಟ್ಟಿಯಾಗುತ್ತೆ. ಆದರೆ ಇಲ್ಲಿ ತನ್ನ ಸೇಹಿತರಿಂದ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿಸಿಕೊಂಡು ವಿದ್ಯಾರ್ಥಿಯೋರ್ವ ಅಂತಿಮ ವಿದಾಯ ಹೇಳಿದ್ದಾನೆ .

ಹೌದು, ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ನಲ್ಲಿ ಓದುತ್ತಿದ್ದ ಸುಹಾಸ್ ಸೌದ್ರಿ ಎಂಬ ಬಾಲಕನಿಗೆ ಆತನ ಸ್ನೇಹಿತರು ನಿನ್ನೆ ಶಾಲೆಯ ಆವರಣದಲ್ಲಿ ಫ್ರೆಂಡ್ ಶಿಪ್ ಬೆಲ್ಟ್ ಕಟ್ಟುವ ಮೂಲಕ ಅಂತಿಮ‌ ವಿದಾಯ ಹೇಳಿದ್ದಾರೆ.

ಕಿಡ್ನಿ ವೈಫಲ್ಯದಿಂದ ಇನ್ನೇನು ಸಾವು ಸಮೀಪಿಸುತ್ತಿದೆ ಎನ್ನುವಾಗ ಬಾಲಕನೊಬ್ಬ ತನ್ನ ಸ್ನೇಹಿತರು ಹಾಗೂ ಶಾಲೆಯನ್ನು ನೋಡಲು ಬಯಸಿ ಆ ಆಸೆಯನ್ನು ಈಡೇರಿಸಿಕೊಂಡಿದ್ದಾನೆ.
ಫ್ರೆಂಡ್​ಷಿಪ್​ ಡೇ (ಜುಲೈ 30) ನಿಮಿತ್ತ ತನ್ನ ಸ್ನೇಹಿತರಿಂದ ಗೆಳೆತನದ ಬೆಲ್ಟ್​​ ಧರಿಸಿಕೊಂಡು ಬಾಲಕ ಸುಹಾಸ್​ ಸೌದ್ರಿ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ.

ಸುಹಾಸ್​ ಸೌದ್ರಿಗೆ ಬಾಲ್ಯದಿಂದಲೂ ಕಿಡ್ನಿ ಸಮಸ್ಯೆ ಇತ್ತು. ಕಳೆದ ಒಂದು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದನು. ಇನ್ನೇನು ತನ್ನ ಅಂತಿಮ ಕಾಲ ಹತ್ತಿರ ಬಂದಿದೆ ಎಂದು ಆತನಿಗೆ ಅನ್ನಿಸಿತ್ತೋ ಏನೋ, ತೀವ್ರ ಅನಾರೋಗ್ಯದ ನಡುವೆಯೂ ಶಾಲೆ, ಶಿಕ್ಷಕರು, ಸ್ನೇಹಿತರನ್ನು ನೆನೆಪಿಸಿಕೊಂಡಿದ್ದ ಸುಹಾಸ್. ಇದೇ ಕಾರಣಕ್ಕೆ ಆತನನ್ನು ನಿನ್ನೆ (ಜುಲೈ 30) ಶಾಲೆಗೆ ಕರೆದುಕೊಂಡು ಬಂದಿದ್ದರು ಪಾಲಕರು.

ಈ ವೇಳೆ ಶಾಲಾ ಆವರಣದಲ್ಲಿ ಕಾರಿನಲ್ಲಿಯೇ ಮಲಗಿದ್ದ ಸುಹಾಸ್​ನನ್ನು ಮುತ್ತುವರೆದಿದ್ದರು ಸ್ನೇಹಿತರು. ಅವರೆಲ್ಲರಿಂದ ಫ್ರೆಂಡ್​ಷಿಪ್​ ಬೆಲ್ಟ್​ ಕಟ್ಟಿಸಿಕೊಂಡನು.
ಸ್ನೇಹಿತ ಸುಹಾಸ್​ನ ಪರಸ್ಥಿತಿ ಕಂಡು ಕಣ್ಣೀರು ಹಾಕುತ್ತಾ ಫ್ರೆಂಡ್​ಶಿಪ್​ ಬೆಲ್ಟ್ ಕಟ್ಟಿ ಅಂತಿಮ ವಿದಾಯ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!