ಚಿತ್ರದುರ್ಗದಲ್ಲಿ ಭರ್ಜರಿ ಪೊಲೀಸ್‌ ಕಾರ್ಯಾಚರಣೆ: 42 ಸಾವಿರ ರೂ. ಮೌಲ್ಯದ ಮದ್ಯ ವಶ

ಹೊಸದಿಗಂತ ವರದಿ ಚಿತ್ರದುರ್ಗ:

ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮಾರ್ಚ್22 ಬೆಳಿಗ್ಗೆ 9 ಗಂಟೆಯಿಂದ ಮಾರ್ಚ್ 23ರ ಬೆಳಿಗ್ಗೆ 9 ಗಂಟೆಯವರೆಗೆ ಜಿಲ್ಲೆಯಾದ್ಯಂತ ಪೊಲೀಸ್ ಕಾರ್ಯಾಚರಣೆಯಲ್ಲಿ ರೂ.42,,105 ಮೌಲ್ಯದ 85,37 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ 11 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದ್ರ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.

ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ 45,38,000 ರೂ. ನಗದು, 1,08, 687 ರೂ. ಮೌಲ್ಯದ 232 ಲೀಟರ್ ಮದ್ಯ, 47,760 ರೂ. ಮೌಲ್ಯದ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಾವುದೇ ರೀತಿಯ ಮಾದಕ ವಸ್ತುಗಳು ಹಾಗೂ ಚಿನ್ನಾಭರಣಗಳನ್ನು ದೊರಕಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

6,32 ರೂ. ಲಕ್ಷದ ಗಾರ್ಮೆಂಟ್ಸ್ ವಶ : ಜಿ.ಎಸ್.ಟಿ. ದಂಡ ವಸೂಲಿ
ಮಾದರಿ ನೀತಿ ಸಂಹಿತೆ ಹಿನ್ನಲೆಯಲ್ಲಿ ವಾಣಿತ್ಯ ತೆರಿಗೆ ಇಲಾಖೆಯಿಂದ ಮಾರ್ಚ್ 22 ಬೆಳಿಗ್ಗೆ 9 ಗಂಟೆಯಿಂದ ಮಾರ್ಚ್ 23 ರ ಬೆಳಿಗ್ಗೆ9 ಗಂಟೆಯವರೆಗೆ ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿ, 6,32,553 ರೂ. ಮೌಲ್ಯದ 5479 ಗಾರ್ಮೆಂಟ್ಸ್ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ 62968 ರೂ. ಜಿ.ಎಸ್.ಟಿ. ದಂಡ ವಸೂಲಿ ಮಾಡಲಾಗಿದೆ ಎಂದು ವಾಣಿಜ್ಯ ತೆರೆಗೆ ಇಲಾಖೆ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!